Party Rounds: ಬಿಜೆಪಿ ಸರ್ಕಾರದ ಕಾನೂನುಗಳ ತಂಟೆಗೆ ಹೋಗಲ್ಲ ಕಾಂಗ್ರೆಸ್‌?

ಪ್ರಣಾಳಿಕೆಯಲ್ಲಿ ಘೋಷಿಸಿದ್ದ ನಿರ್ಧಾರಕ್ಕೆ ಕಾಂಗ್ರೆಸ್‌ ಸರ್ಕಾರ ತಾತ್ಕಾಲಿಕ ಬ್ರೇಕ್‌ ನೀಡಿದೆ. ಲೋಕಸಭೆ ಚುನಾವಣೆವರೆಗೂ ಸುಮ್ಮನಿರಲು ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದ ಹಿನ್ನಲೆಯಲ್ಲಿ ಎರಡೂ ಕಾಯ್ದೆಗಳ ವಾಪಸ್‌ ಗೋಜಿಗೆ ಹೋಗದಿರಲು ನಿರ್ಧರಿಸಿದೆ. 

First Published Jul 4, 2023, 8:30 PM IST | Last Updated Jul 4, 2023, 8:30 PM IST

ಬೆಂಗಳೂರು(ಜು.04):  ಹಿಂದೆ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನ ಸಂಪೂರ್ಣವಾಗಿ ನಿಷೇಧಿಸಿತ್ತು. ಕಾಂಗ್ರೆಸ್‌ ಅದನ್ನ ಸದನದ ಒಳಗೂ ಹೊರಗೂ ವಿರೋಧಿಸಿತ್ತು. ಆಮಿಷದ ಒತ್ತಾಯದ ಮತಾಂತರವನ್ನ ನಿಷೇಧಿಸಿ ಬಿಜೆಪಿ ಸರ್ಕಾರ ಕಾಯ್ದೆಯನ್ನ ಜಾರಿಗೆ ತಂದಿತ್ತು. ಕಾಂಗ್ರೆಸ್‌ ಅದನ್ನೂ ವಿರೋಧಿಸಿತ್ತು. ನಮ್ಮ ಸರ್ಕಾರ ಬಂದ ಮೇಲೆ ಈ ಎಲ್ಲ ಕಾಯ್ದೆಗಳನ್ನ ವಾಪಸ್ ತೆಗೆದುಕೊಳ್ಳುತ್ತೇವೆ ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದರು. ಇದೀಗ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ನಿರ್ಧಾರಕ್ಕೆ ಕಾಂಗ್ರೆಸ್‌ ಸರ್ಕಾರ ತಾತ್ಕಾಲಿಕ ಬ್ರೇಕ್‌ ನೀಡಿದೆ. ಲೋಕಸಭೆ ಚುನಾವಣೆವರೆಗೂ ಸುಮ್ಮನಿರಲು ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದ ಹಿನ್ನಲೆಯಲ್ಲಿ ಎರಡೂ ಕಾಯ್ದೆಗಳ ವಾಪಸ್‌ ಗೋಜಿಗೆ ಹೋಗದಿರಲು ನಿರ್ಧರಿಸಿದೆ. 

Party Rounds: ಕಮಿಷನ್‌ ಆರೋಪ- ಎಚ್‌ಡಿಕೆ Vs ಕಾಂಗ್ರೆಸ್‌ ನಾಯಕರು ಜಟಾಪಟಿ