Suvarna special:ಬಿ.ಎಸ್. ಯಡಿಯೂರಪ್ಪ ಬಾಂಬ್- ಕೇಸರಿ ಕೋಟೆಯಲ್ಲಿ ಸಂಚಲನ..!
ಬಿಜೆಪಿಯಲ್ಲಿ ನಾಲ್ಕೈದು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಬಿಜೆಪಿ ಶಾಸಕರಲ್ಲಿ ಯಾರಿಗೆಲ್ಲಾ ಟಿಕೆಟ್ ಮಿಸ್ ಆಗಲಿದೆ ಎಂದು ಕೇಸರಿ ಕೋಟೆಯಲ್ಲಿ ಸಂಚಲನ ಶುರುವಾಗಿದೆ.
ಬೆಂಗಳೂರು (ಮಾ.08): ಬಿಜೆಪಿಯಲ್ಲಿ ನಾಲ್ಕೈದು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಬಿಜೆಪಿ ಶಾಸಕರಲ್ಲಿ ಯಾರಿಗೆಲ್ಲಾ ಟಿಕೆಟ್ ಮಿಸ್ ಆಗಲಿದೆ ಎಂದು ಕೇಸರಿ ಕೋಟೆಯಲ್ಲಿ ಸಂಚಲನ ಶುರುವಾಗಿದೆ. ಇನ್ನು ಬಿಜೆಪಿ ಗೆಲುವೊಂದೇ ಮಾನದಂಡ ಮಾಡಿಕೊಂಡಿದ್ದು, ಯಾರ ತಲೆದಂಡ ಆಗಲಿದೆ ಎನ್ನುವುದು ಗೊಂದಲ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಬರಲಿದ್ಯಾ ಗುಜರಾತ್ ಮಾಡೆಲ್..? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಯಡಿಯೂರಪ್ಪ ಅವರು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆ ರಾಜ್ಯಾದ್ಯಂತ ಬಿಜೆಪಿ ಪರ ಅಲೆ ಜೋರಾಗಿದೆ. 140ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದರು. ಆದರೆ, ಟಿಕೆಟ್ ಹಂಚಿಕೆ ವಿಷಯದಲ್ಲಿಯೂ ಕಟ್ಟುನಿಟ್ಟಿನ ಮಾನದಂಡಗಳನ್ನು ಅನುಸರಿಸಲಾಗುವುದು. ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾದರಿ ಅನ್ನೋದಕ್ಕಿಂತ ಪಕ್ಷದ ಹೈಕಮಾಂಡ್ ಹಾಲಿ ಶಾಸಕರೆಲ್ಲರ ಚಲನ ವಲನ ಗಮನಿಸುತ್ತಿದೆ. ಇದನ್ನಾಧರಿಸಿ ಹೇಳೋದಾದಲ್ಲಿ ಹಾಲಿ ನಾಲ್ಕೈದು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿರುವುದು ಸಂಚಲನ ಸೃಷ್ಟಿಯಾಗಲು ಕಾರಣವಾಗಿದೆ.
ಹಿಟ್ ಲಿಸ್ಟ್‌ನಲ್ಲಿರುವ ಶಾಸಕರು ಯಾರು? : ಯಡಿಯೂರಪ್ಪ ಅವರ ಒಂದೇ ಒಂದು ಮಾತಿಗೆ ಒಂದಷ್ಟು ಮಂದಿಯ ಎದೆಯಲ್ಲಿ ಢವ ಢವ ಕೂಡ ಶುರುವಾಗಿದೆ. ಹಾಗಾದ್ರೆ ಈ ಬಾರಿ ಟಿಕೆಟ್ ಮಿಸ್ ಮಾಡಿಕೊಳ್ಳಲಿರೋ ಬಿಜೆಪಿ ಶಾಸಕರು ಯಾರು..? ಹಾಗಾದ್ರೆ 120 ಮಂದಿ ಬಿಜೆಪಿ ಶಾಸಕರ ಪೈಕಿ ಈ ಬಾರಿ ಯಾರಿಗೆಲ್ಲಾ ಟಿಕೆಟ್ ಮಿಸ್..? ಹೈಕಮಾಂಡ್ ಹಿಟ್'ಲಿಸ್ಟ್'ನಲ್ಲಿರೋ ಆ ಶಾಸಕರು ಯಾರು ಎನ್ನುವುದು ಇಲ್ಲಿದೆ ನೋಡಿ. ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಬಿಜೆಪಿ ಹೈಕಮಾಂಡ್ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಲ್ಲಿ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಸೂತ್ರವೂ ಒಂದು. ಒಂದಷ್ಟು ಮಂದಿ ಶಾಸಕರಿಗೆ ಶಾಕ್ ಕೊಡಲು ಹೈಕಮಾಂಡ್ ಮುಂದಾಗಿದೆ. ಬಿಜೆಪಿಯಲ್ಲಿರೋದು ಬಂಡಾಯಕ್ಕೆಲ್ಲಾ ತಲೆಕೆಡಿಸಿಕೊಳ್ಳುವಂಥಾ ಹೈಕಮಾಂಡ್ ಅಲ್ಲ. ಇದು ಮೋದಿ-ಅಮಿತ್ ಶಾ ಜೋಡಿ ನಾಯಕತ್ವದ ಬಲಿಷ್ಠ ಹೈಕಮಾಂಡ್.