Asianet Suvarna News Asianet Suvarna News

ಹರಿಯಾಣದಲ್ಲಿ ಅಚ್ಚರಿ ಹುಟ್ಟಿಸಿದ ಬಿಜೆಪಿ ಹ್ಯಾಟ್ರಿಕ್ ವಿಕ್ಟರಿ: ಪೈಲ್ವಾನ್ ಗೆದ್ದರೂ ‘ಕೈ’ಗೆಟುಕದ ಗೆಲುವು!

ಜಮ್ಮು ಕಾಶ್ಮೀರ ಮತ್ತು ಹರಿಯಾಣದ ಚುನಾವಣೆಗಳು ಅನಿರೀಕ್ಷಿತ ರಾಜಕೀಯ ಸನ್ನಿವೇಶವನ್ನು ಸೃಷ್ಟಿಸಿವೆ. ಬಿಜೆಪಿಯ ಕಾರ್ಯತಂತ್ರಗಳು ಹರಿಯಾಣದಲ್ಲಿ ಯಶಸ್ವಿಯಾಗಿವೆ, ಆದರೆ ಕಾಂಗ್ರೆಸ್ ಮಾಡಿದ ತಪ್ಪುಗಳು ಅವರನ್ನು ಹತ್ತು ವರ್ಷಗಳ ಕಾಲ ಅಧಿಕಾರದಿಂದ ದೂರವಿಟ್ಟಿವೆ.

First Published Oct 9, 2024, 1:48 PM IST | Last Updated Oct 9, 2024, 1:48 PM IST

ರಾಷ್ಟ್ರ ರಾಜಕಾರಣದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿದ್ದ ರಾಜಕೀಯ ಸಂಗ್ರಾಮವೊಂದು, ಈಗ ಮುಗಿದಿದೆ.. ಜಮ್ಮು ಕಾಶ್ಮೀರ ಹಾಗೂ ಹರಿಯಾಣ, ಈ ಎರಡೂ ರಾಜ್ಯಗಳಲ್ಲಿ ನಡೆದ ಚುನಾವಣೆ ಚಿತ್ರವಿಚಿತ್ರ ರಾಜಕೀಯ ಸಮೀಕರಣವನ್ನ ದೇಶದ ಮುಂದಿಟ್ಟಿದೆ.. ಅದರಲ್ಲೂ ಹರ್ಯಾಣದ ಬಿಜೆಪಿ ಗೆಲುವು, ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಿಟ್ಟಿದೆ.. ಅಷ್ಟಕ್ಕೂ ಈ ಚುನಾವಣೆಗಳಿಂದ ಬದಲಾಗಿದ್ದೇನು? ಬದಲಾಗೋದೇನು? ಅದೆಲ್ಲಾ ಗೊತ್ತಾಗ್ಬೇಕು ಅಂದ್ರ, ನೀವು ಈ ವರದಿ ನೋಡ್ಲೇ ಬೇಕು.

ಕಾಂಗ್ರೆಸ್ ಅದ್ಯಾವ್ಯಾವ ಸಂಗತಿಗಳನ್ನ ನೆಚ್ಚಿಕೊಂಡು ರಣಾಂಗಣ ಪ್ರವೇಶಿಸಿತ್ತೊ? ಆ ಸಂಗತಿಗಳೇ ಕಾಂಗ್ರೆಸ್ಸಿಗೆ ಶಾಪವಾದ ಹಾಗೆ ಭಾಸವಾಗ್ತಾ ಇದೆ. ಅದಕ್ಕಿಂತಾ ಮುಖ್ಯವಾಗಿ, ತನ್ನ ಮುಂದಿರೋ ಸವಾಲು ಎಂಥವು? ಅವುಗಳಿಗೆ ಸರಿಯಾದ ಪರಿಹಾರ ಏನು ಅಂತ ಅರ್ಥ ಮಾಡ್ಕೊಂಡೇ ಹೆಜ್ಜೆ ಇಟ್ಟಿತ್ತು ಬಿಜೆಪಿ. ರಾಜಕೀಯ ಅಂದ್ರೆ ಅಪ್ಪಟ ಲೆಕ್ಕಾಚಾರ.. ಎಷ್ಟು ಎಷ್ಟು ನೀಟಾಗಿ ಲೆಕ್ಕ ಹಾಕ್ತಾರೋ, ಅಷ್ಟು ಅಚ್ಚುಕಟ್ಟಾಗಿ ಪಟ್ಟದ ಮೇಲೆ ಕೂರೋಕೆ ಸಧ್ಯವಾಗುತ್ತೆ. ಕೇಸರಿ ಪಾಳಯದಲ್ಲಿರೋ ಅಂಥಾ ರಾಜಕೀಯ ಗಣಿತಜ್ಞರ ಲೆಕ್ಕಾಚಾರ, ಹರಿಯಾಣದಲ್ಲಿ ವರ್ಕ್ ಆಗಿದೆ. ಬರೀ ಇಷ್ಟೇ ಅಲ್ಲ, ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು, ಬಿಜೆಪಿನಾ 10 ವರ್ಷಗಳ ನಂತರವೂ ಅಧಿಕಾರದಲ್ಲಿ ಉಳಿಯೋ ಹಾಗೆ ಮಾಡಿde. ಕಾಂಗ್ರೆಸ್ಸಿನನ ಅದೊಂದು ನಿರ್ಣಯ ಒಂದು ದಶಮಾನದ ನಂತರ, ಹರಿಯಾಣದಲ್ಲಿ ಗೆಲ್ಲೋ ಅವಕಾಶವನ್ನೂ ಕೈಚೆಲ್ಲಿದೆ. 

ಒಟ್ಟಾರೆ ಬಿಜೆಪಿ ತಾನೇನು ಲೆಕ್ಕಾಚಾರ ಹಾಕಿತ್ತೋ, ಅದು ವರ್ಕ್ ಔಟ್ ಆಗಿದೆ. ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದೆ. ಹರಿಯಾಣದ ಈ ರಾಜಕೀಯ ಗೆಲುವು, ಬಿಜೆಪಿಯ ಆತ್ಮಸ್ಥೈರ್ಯವನ್ನಂತೂ ಹೆಚ್ಚಿಸಿದೆ. ಮುಂದಿನ ಎಲೆಕ್ಷನ್‌ಗಳಲ್ಲೂ ಇದರ ಇಂಪ್ಯಾಕ್ಟ್ ಎದ್ದುಕಾಣೋದ್ರಲ್ಲಿ ಅನುಮಾನವೇ ಇಲ್ಲ.

Video Top Stories