ಕಾಂಗ್ರೆಸ್ ಶಾಸಕರಿಗೆ, ಮುಖಂಡರಿಗೆ ಸಿಗದ ಗುಡ್ ನ್ಯೂಸ್: ನಿಗಮ ನೇಮಕಾತಿ..ಹೈಕಮಾಂಡ್ ಹೇಳಿದ್ದೇನು..?
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಜೊತೆಗೆ ಸಿಎಂ ಚರ್ಚೆ
ಮಾತುಕತೆ ವೇಳೆ ಸಕಾರಾತ್ಮಕ ಪ್ರತಿಕ್ರಿಯೆ ನೀಡದ ಸುರ್ಜೇವಾಲ
ಪಂಚ ರಾಜ್ಯಗಳ ಚುನಾವಣೆ ಬಳಿಕ ನಿಗಮ ನೇಮಕಕ್ಕೆ ಸಲಹೆ
ದೆಹಲಿಯಿಂದ ಬರಬಹುದಾದ ಸಿಹಿ ಸುದ್ದಿಗೆ ಕಾದಿದ್ದ ಕಾಂಗ್ರೆಸ್(Congress) ಶಾಸಕರು, ಮುಖಂಡರಿಗೆ ನಿರಾಸೆ ಉಂಟಾಗಿದೆ. ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಕಾಯ್ತಿದ್ದವರಿಗೆ ಭಾರೀ ನಿರಾಸೆ ಆದಂತಾಗಿದೆ. ನಿಗಮ ನೇಮಕಕ್ಕೆ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿಲ್ಲ. ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯೊಂದಿಗೆ ಸಿಎಂ ಸಿದ್ದರಾಮಯ್ಯ(Siddaramaiah) ದೆಹಲಿಗೆ(Delhi) ಹೋಗಿದ್ದರು. ಹೈಕಮಾಂಡ್ ಅನುಮತಿ ಸಿಗದೇ ನಿರಾಸೆಯಿಂದ ಸಿಎಂ ವಾಪಸ್ ಆಗಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ(Randeep Surjewala) ಜೊತೆಗೆ ಸಿಎಂ ಚರ್ಚೆ ನಡೆಸಿದ್ದು, ಮಾತುಕತೆ ವೇಳೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸುರ್ಜೇವಾಲ ನೀಡಿಲ್ಲ ಎನ್ನಲಾಗ್ತಿದೆ. ಪಂಚ ರಾಜ್ಯಗಳ ಚುನಾವಣೆ ಬಳಿಕ ನಿಗಮ ನೇಮಕಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ವೀಕ್ಷಿಸಿ: ಕೇಸರಿ ಪಡೆಯಲ್ಲಿ ‘ಮೈತ್ರಿ’ ಮುನಿಸು : ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿರುವ ನಾಯಕರು