Winter Session: ಇಂದು 'ಕೈಪಡೆ'ಯಿಂದ ಅಭಿವೃದ್ಧಿ ಜಪ: ಸರ್ಕಾರವನ್ನು ಕಟ್ಟಿಹಾಕಲು ರಣತಂತ್ರ

ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನದ 2 ನೇ ದಿನವಿದ್ದು,  ಸರ್ಕಾರದ ವಿರುದ್ಧ  ಅಸ್ತ್ರ ಪ್ರಯೋಗಿಸಲು  ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.
 

First Published Dec 20, 2022, 10:17 AM IST | Last Updated Dec 20, 2022, 10:53 AM IST

ಚಳಿಗಾಲದ ಅಧಿವೇಶನದಲ್ಲಿ  ಸರ್ಕಾರವನ್ನು ಕಟ್ಟಿಹಾಕಲು  ಸನ್ನದ್ಧವಾಗಿರುವ ಕೈ ನಾಯಕರು, ಸದನ ಕದನ ಹಾಗೂ ಭಾವನಾತ್ಮಕ ವಿಚಾರಗಳಿಗೆ ಬದಲಾಗಿ ಅಭಿವೃದ್ಧಿಯ ಮಂತ್ರ ಪಠಣ ಮಾಡಲು ಮುಂದಾಗುತ್ತಿದೆ. ಸದನದಲ್ಲಿ ಜನಸಾಮನ್ಯರ ಸಂಕಷ್ಟಗಳಿಗೆ ಒತ್ತು ಕೊಡಲು ಕಾಂಗ್ರೆಸ್ ತೀರ್ಮಾನನಿಸಿದೆ. ಕಾಂಗ್ರೆಸ್‌ ಇಂದು ರೈತರ ಸಂಕಷ್ಟ ಬಗ್ಗೆ ನಿಲುವಳಿ ಮಂಡನೆ ಮಾಡಲು ನಿರ್ಧಾರಿಸಿದ್ದು, ಧರ್ಮ ಮತ್ತು ಭಾವನಾತ್ಮಕ ವಿಚಾರಗಳಿಂದ ಅಂತರ ಕಾಯ್ದುಕೊಳ್ಳಲಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ  ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಸದನದಲ್ಲಿ ಕಲ್ಯಾಣ ಕರ್ನಾಟಕ ವಿಚಾರಗಳ ಬಗ್ಗೆ ಹೆಚ್ಚು ಚರ್ಚೆ ಆಗಲಿದೆ.

Karnataka Politics : 500ಕ್ಕೂ ಹೆಚ್ಚು ಸದಸ್ಯರು ಬಿಜೆಪಿಗೆ ಸೇರ್ಪಡ ...