Asianet Suvarna News Asianet Suvarna News

Karnataka Politics : 500ಕ್ಕೂ ಹೆಚ್ಚು ಸದಸ್ಯರು ಬಿಜೆಪಿಗೆ ಸೇರ್ಪಡೆ

ತಾಲೂಕಿನಲ್ಲಿ ಹಲವಾರು ಜನ ಬಿಜೆಪಿಯ ಜನಪರ ಕಾರ್ಯಗಳನ್ನು ಮೆಚ್ಚಿ ಸ್ವಯಂಪ್ರೇರಿತರಾಗಿ ಪಕ್ಷಕ್ಕೆ ಸೇರ್ಪಡೆಗೊಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ್‌ ಕುಮಾರ್‌ ತಿಳಿಸಿದರು.

Karnataka Politics: More than 500 members join BJP snr
Author
First Published Dec 20, 2022, 5:56 AM IST

  ಕೊರಟಗೆರೆ (ಡಿ. 20): ತಾಲೂಕಿನಲ್ಲಿ ಹಲವಾರು ಜನ ಬಿಜೆಪಿಯ ಜನಪರ ಕಾರ್ಯಗಳನ್ನು ಮೆಚ್ಚಿ ಸ್ವಯಂಪ್ರೇರಿತರಾಗಿ ಪಕ್ಷಕ್ಕೆ ಸೇರ್ಪಡೆಗೊಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ್‌ ಕುಮಾರ್‌ ತಿಳಿಸಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹನುಮನಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಕತ್ತಿನಾಗೇನಹಳ್ಳಿ ಹಾಗೂ ಹನುಮೇನಹಳ್ಳಿ ಎರಡು ಗ್ರಾಮದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನರು ಅನ್ಯ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರಾಗಿ ಸೇರ್ಪಡೆಯಾಗಿದ್ದಾರೆ. ಇದರ ಜೊತೆಗೆ ಬಹಳ ವರ್ಷಗಳಿಂದಲೂ ಬಿಜೆಪಿ ಅಭ್ಯರ್ಥಿಯು ತನ್ನ ಸ್ಥಾನವನ್ನು ಭದ್ರಗೊಳಿಸಲು ಪ್ರಯತ್ನ ಪಡುತ್ತಲೇ ಇರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹಳ್ಳಿ ಹಳ್ಳಿಯ ಗ್ರಾಮಸ್ಥರು ಬಿಜೆಪಿ ಅಭ್ಯರ್ಥಿಯನ್ನ ಅಧಿಕಾರಕ್ಕೆ ತರಲೇಬೇಕು ಎಂದು ಸ್ವಯಂ ಪ್ರೇರಿತರಾಗಿ ನಮ್ಮ ಬಿಜೆಪಿ ಪಕ್ಷವನ್ನು ಸೇರುತ್ತಿದ್ದಾರೆ ಎಂದರು.

ವಿಜಯೇಂದ್ರನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ: ಬಿ.ಎಸ್‌.ಯಡಿಯೂರಪ್ಪ

ಈ ಹಿಂದೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದವರೆಲ್ಲರೂ ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೋ ಇಲ್ಲವೋ ಎನ್ನುವುದನ್ನು ಜನರೇ ನಿರ್ಧಾರ ಮಾಡಿದ್ದಾರೆ. ಆದ್ದರಿಂದ ಇತರೆ ಪಕ್ಷದ ಅಭ್ಯರ್ಥಿಗಳ ಬಗ್ಗೆ ನಾವು ಟೀಕಿಸುವುದು ಬೇಡ. ನಮ್ಮ ಬಿಜೆಪಿ ಪಕ್ಷವನ್ನು ಸದೃಢ ಪಡಿಸುವುದು ನಮ್ಮೆಲ್ಲರ ಕರ್ತವ್ಯ. ಅದರಂತೆ ಪ್ರತಿ ಗ್ರಾಮಕ್ಕೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ನಮ್ಮ ಧ್ಯೇಯ ಮತ್ತು ಸಿದ್ದಾಂತ ಇದುವೇ ಬಿಜೆಪಿ ಪಕ್ಷದ ಸಂಕಲ್ಪ ಎಂದು ತಿಳಿಸಿದರು.

ಅನ್ಯ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರು ಮಾತನಾಡಿ, ನಮ್ಮ ಗ್ರಾಮಕ್ಕೆ ಪಟ್ಟಣದಿಂದ ಸಂಚಾರ ಮಾಡಲು ಅನೇಕ ವರ್ಷಗಳಿಂದಲೂ ರಸ್ತೆ ಇಲ್ಲ, ಇದ್ದ ಸೇತುವೆಯು ಮಳೆಯಿಂದ ಬಿದ್ದುಹೋಗಿದೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ನಮ್ಮ ಗ್ರಾಮಸ್ಥರೆಲ್ಲರೂ ಸೇರಿ ಅನಿಲ್‌ ಕುಮಾರ್‌ರವರಿಗೆ ತಿಳಿಸಿದ್ದೇವೆ. ಈಗಾಗಲೇ ಅದಕ್ಕೆ ಅವರು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ. ನಮ್ಮ ಊರಿನ ಗ್ರಾಮಸ್ಥರ ಅನೇಕ ವಷÜರ್‍ಗಳ ಬೇಡಿಕೆ ಇದೀಗ ನೆರವೇರಿದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ನಮ್ಮ ಗ್ರಾಮಕ್ಕೆ ತಂದುಕೊಟ್ಟಿದ್ದಾರೆ. ಅದಕ್ಕಾಗಿ ನಮ್ಮ ಗ್ರಾಮಸ್ಥರು ಅನ್ಯ ಪಕ್ಷಗಳಿಗೆ ಮತ ಹಾಕುವ ಬದಲು ಬಿಜೆಪಿ ಪಕ್ಷಕ್ಕೆ ಮತ ಹಾಕುತ್ತೇವೆ ಎಂದು ನಾವೆಲ್ಲರೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ ಎಂದು ತಿಳಿಸಿದರು.

ಹನುಮನಹಳ್ಳಿಯ ವಿದ್ಯಾರ್ಥಿ ರಮೇಶ್‌ ಮಾತನಾಡಿ, ನಮ್ಮ ಹನುಮನಹಳ್ಳಿಯ ಕಾರ್ಯಕರ್ತರ ಸೇರ್ಪಡೆ ಸಭೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಬೃಹದಾಕಾರವಾಗಿ ಬೆಳೆದು ನಿಂತಿದ್ದ ಬೇಲಿಗಿಡಗಳನ್ನು ಗಮನಿಸಿದ ಅನಿಲ್‌ ಕುಮಾರ್‌ ಮರುದಿನ ಬೆಳಗ್ಗೆ ಹನುಮನಹಳ್ಳಿಗೆ ಸಂಪರ್ಕಿಸುವ ರಸ್ತೆಗಳ ಅಕ್ಕಪಕ್ಕದಲ್ಲಿದ್ದ ಬೇಲಿಗಿಡಗಳನ್ನು ತೆರವುಗೊಳಿಸಿ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಆರಾಮಾಗಿ ಪಟ್ಟಣ ಹಾಗೂ ಹಳ್ಳಿಗಳಿಗೆ ಓಡಾಡುವಂತೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಪವನ್‌ ಕುಮಾರ್‌, ಗುರುದತ್‌, ಸಿ ಎಸ್‌ ಹನುಮಂತರಾಜು,ದಾಡಿ ವೆಂಕಟೇಶ್‌, ಲೋಕೇಶ್‌ ಕೊಡಗದಾಲ,ರಘು, ನಂಜುಂಡಯ್ಯ, ಯುವಮೋರ್ಚಾದ ಅರುಣ್‌, ಗಿರೀಶ್‌ ಗೌಡ, ಲೋಕೇಶ್‌, ನಯನ್‌, ಹೊಳವನಹಳ್ಳಿ ಹೋಬಳಿ ಅಧ್ಯಕ್ಷ ಲೋಕೇಶ್‌, ದಯಾನಂದ್‌, ಗ್ರಾ.ಪಂ ಸದಸ್ಯ ಚೇತನ್‌ ಆರಾಧ್ಯ, ಮುಕ್ಕಣ್ಣಪ್ಪ ಸೇರಿದಂತೆ ಬಿಜೆಪಿ ಪಕ್ಷವನ್ನು ಸೇರಿದ ಕಾರ್ಯಕರ್ತರು ಹಾಜರಿದ್ದರು..

ಮುನಿಸು ಮುಚ್ಚಿದ ಬಿಜೆಪಿ ದಿಗ್ಗಜರು

ಕೊಪ್ಪಳ : ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ, ಹೀಗಾಗಿ ಅವರು ಮುನಿಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಅಲ್ಲಗಳೆಯಲು ಕೊಪ್ಪಳದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಒಗ್ಗಟ್ಟು ಪ್ರದರ್ಶಿಸಿ, ಪರಸ್ಪರರನ್ನು ಹಾಡಿ ಹೊಗಳಿದರು. ಸ್ವತಃ ಬಿಎಸ್‌ವೈ ಯಾವುದೇ ಮುನಿಸು ಇಲ್ಲ ಎಂದರು.

ಬಿಎಸ್‌ವೈ ಕರ್ನಾಟಕ ಬಿಜೆಪಿಯ ಪಿತಾಮಹ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಬಿಜೆಪಿ ರಾಷ್ಟ್ರಧ್ಯಕ್ಷ ಜೆ.ಪಿ.ನಡ್ಡಾ ಅವರು ಬಹಿರಂಗವಾಗಿಯೇ ಬಿಎಸ್‌ವೈ ಅವರನ್ನು ಹಾಡಿಹೊಗಳಿದ್ದಾರೆ. ‘ಕರ್ನಾಟಕ ಬಿಜೆಪಿಯ ಪಿತಾಮಹ’ ಎಂದು ಯಡಿಯೂರಪ್ಪ ಅವರನ್ನು ನಡ್ಡಾ ಕರೆದಿದ್ದಾರೆ. ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ ಪಿತಾಮಹ. ಅವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. 

Chamarajanagar: ಬಿಎಸ್‌ವೈ ಫೋಟೋ ಇಲ್ಲದ್ದಕ್ಕೆ ಅಭಿಮಾನಿಗಳ ಆಕ್ರೋಶ

ಅವರ ಆಡಳಿತಾವಧಿಯ ಜನಪರ ಯೋಜನೆಗಳನ್ನು ಇದೀಗ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್‌ ಕಾರ್ಡ್‌ ಇಟ್ಟುಕೊಂಡಿದ್ದಾರೆ. ಈ ರೀತಿಯ ಅಭಿವೃದ್ಧಿ ಕಾರ್ಯವನ್ನು ಕರ್ನಾಟಕದಲ್ಲಿ ಬೇರಿನ್ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಈ ರಿಪೋರ್ಟ್‌ ಕಾರ್ಡ್‌ ಅನ್ನು ಮುಂದಿಟ್ಟುಕೊಂಡೇ ನಾವು ಚುನಾವಣೆಗೆ ಹೋಗುತ್ತೇವೆ ಎಂದಿದ್ದಾರೆ

 

Follow Us:
Download App:
  • android
  • ios