ಕೈ ರೀವೆಂಜ್ ಪಾಲಿಟಿಕ್ಸ್‌..?: ಗುತ್ತಿಗೆ ನೌಕರನನ್ನು ಕೆಲಸದಿಂದ ತೆಗೆಯಲು ಶಾಸಕರ ಒತ್ತಡ..?

ಮಂಡ್ಯದ ನಂತರ ಮೈಸೂರಿನಲ್ಲಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
 

First Published Jul 15, 2023, 10:49 AM IST | Last Updated Jul 15, 2023, 10:49 AM IST

ಮೈಸೂರು: ಕಾಂಗ್ರೆಸ್‌ನಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗುತ್ತಿದೆಯಾ ಎಂಬ ಅನುಮಾನ ಇದೀಗ ಮೂಡುತ್ತಿದೆ. ಮಂಡ್ಯದ (mandya) ಬಳಿಕ ಮೈಸೂರಿನಲ್ಲಿ(mysore) ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎನ್ನಲಾಗ್ತಿದೆ. ಕೆ.ಆರ್‌.ನಗರ ಶಾಸಕ ಡಿ.ರವಿಶಂಕರ್‌( KR Nagar MLA D. Ravishankar) ವಿರುದ್ಧ ಆರೋಪ ಕೇಳಿಬಂದಿದೆ. ಗುತ್ತಿಗೆ ನೌಕರನನ್ನು(contract employee) ಕೆಲಸದಿಂದ ತೆಗೆಯಲು ಶಾಸಕರು ಒತ್ತಡ ಹಾಕಿದ್ದಾರೆ ಎನ್ನಲಾಗ್ತಿದೆ. ನೌಕರ ಚಲುವರಾಜು ಶಾಸಕ ಡಿ.ರವಿಶಂಕರ್‌ ವಿರುದ್ಧ ಆರೋಪ ಮಾಡಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಲುವರಾಜು ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. ಅವರು 15 ವರ್ಷದಿಂದ ಕೆಲಸ ಮಾಡುತ್ತಿದ್ದರು. ಪ್ರಿನ್ಸಿಪಾಲ್‌ ಕೆಲಸ ಬಿಡಿ ಎಂದು ಒತ್ತಡ ಹಾಕುತ್ತಿದ್ದಾರಂತೆ. ಕೇಳಿದ್ರೆ ನೀವು ಶಾಸಕರ ಬಳಿ ಹೋಗಿ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳುತ್ತಿದ್ದಾರಂತೆ.  

ಇದನ್ನೂ ವೀಕ್ಷಿಸಿ:  Saturday Horoscope: ಇಂದು ಶನಿಪ್ರದೋಷ ಇದ್ದು, ಈಶ್ವರ, ಶನಿ ದೇವರ ಆರಾಧನೆಯನ್ನು ಹೀಗೆ ಮಾಡಿ