ಧರ್ಮ ರಕ್ಷಣೆ, ದೇಶದ ಐಕ್ಯತೆ, ಅಭಿವೃದ್ಧಿ ದೃಷ್ಟಿಯಿಂದ ಮೈತ್ರಿ: ರವೀಂದ್ರ ಶ್ರೀಕಂಠಯ್ಯ

ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವ ವಹಿಸಿದ್ದಾರೆ. ಹಾಗಾಗಿ ನಾವು ಅವರಿಗೆ ಸಪೋರ್ಟ್ ಮಾಡುತ್ತೇವೆ. ಇಲ್ಲಿ ಲಾಭ, ನಷ್ಟದ ಪ್ರಶ್ನೆ ಇಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. 
 

First Published Sep 10, 2023, 2:14 PM IST | Last Updated Sep 10, 2023, 2:14 PM IST

ಮಂಡ್ಯ: ದೇಶದ ಐಕ್ಯತೆ, ಧರ್ಮ ರಕ್ಷಣೆ, ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ(BJP)-ಜೆಡಿಎಸ್‌ (Jds) ಮೈತ್ರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(Narendra modi) ಸಮರ್ಥ ನಾಯಕತ್ವ ವಹಿಸಿದ್ದಾರೆ. ಸುಮಲತಾ(Sumalatha) ಜೆಡಿಎಸ್‌ ಬೆಂಬಲಿಸುವ ಬಗ್ಗೆ ಬಿಜೆಪಿ ಹೇಳಬೇಕು. ಅಭಿವೃದ್ಧಿ ದೃಷ್ಟಿಯಿಂದ ಎನ್‌ಡಿಎ(NDA) ಬೆಂಬಲಿಸುವುದು ಸೂಕ್ತವಾಗಿದೆ. ಬಹುತೇಕ ಮುಖಂಡರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಮಲತಾ ಅವರು ಸಂಸದೆಯಾಗಿ ಹೇಳಿಕೊಳ್ಳುವ ಕೆಲಸ ಮಾಡಿಲ್ಲ ಎಂದು ಮಂಡ್ಯದಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. ಜೆಡಿಎಸ್‌ 8-10 ಸ್ಥಾನವನ್ನು ಕೇಳಿದೆ. ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  ಸುಂದರಿಯನ್ನ ಕೊಂದವನೂ ಈಗ ಬದುಕಿಲ್ಲ..! ಹೇಗಿದ್ದವು ಗಗನ ಸಖಿಯ ಕೊನೆ ಕ್ಷಣಗಳು..!

Video Top Stories