ಕನಕಪುರದಲ್ಲಿ ಡಿಕೆಶಿ ಮೊದಲ ಬಾರಿ ಸೋತಿದ್ರು...!

ಕನಕಪುರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಯಾಗಿ ಕಂದಾಯ ಸಚಿವ ಆರ್.ಅಶೋಕ್ ನಾಮಪತ್ರ ಸಲ್ಲಿಸಿದರು. ಸಚಿವ ಅಶ್ವಥ್ ನಾರಾಯಣ ಸಾಥ್ ನೀಡಿದರು.

First Published Apr 18, 2023, 5:31 PM IST | Last Updated Apr 18, 2023, 5:31 PM IST

ಕನಕಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಇಂದು ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದು ನಾಮಪತ್ರ ಸಲ್ಲಿಕೆ ಮಾಡಿದರು. ಕಂದಾಯ ಸಚಿವರಿಗೆ  ಅಶ್ವಥ್ ನಾರಾಯಣ ಸಾಥ್ ನೀಡಿದರು.ಈ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಕನಕಪುರಕ್ಕೆ ಇಂದು ಪಾದಾರ್ಪಣೆ ಮಾಡುತ್ತಿದ್ದೇನೆ. ಎಲ್ಲಾ ತಯಾರಿಯನ್ನು ಮಡಿಕೊಂಡು ಬಂದಿದ್ದೇನೆ. ಡಿಕೆ ಶಿವಕುಮಾರ್ ಏಳು ಬಾರಿ ಸ್ಪರ್ಧೆ ಮಾಡಿ ಗೆದ್ದಿರಬಹುದು ಮೊದಲನೇ ಬಾರಿ ಸ್ಪರ್ಧೆಮಾಡಿ ಸೋತಿದ್ಧಾರೆ. ಸೋಲು- ಗೆಲವು ಎನ್ನುವುದನ್ನು ಕನಕಪುರ ಜನತೆ ಮಾತ್ರ ಹೇಳಬಹುದು ಹೊರತು ಡಿಕೆಶಿವಕುಮಾರ್‌ ಅಲ್ಲ ಎಂದು ಹೇಳಿದರು. ಇನ್ನು  ಎರಡು ಕ್ಷೇತ್ರದಿಂದ ಸ್ಪರ್ಧೆಮಾಡುವಾಗ ಕಷ್ಠದ ಪ್ರಶ್ನೆ ಬರಲ್ಲ ಬಜೆಪಿಯಿಂದ ಯುದ್ದಮಾಡಲು ಕಳುಹಿಸಿದ್ದಾರೆ . ಯುದ್ದ ಮಾಡುವುದು ಒಬ್ಬ ನಿಷ್ಠಾವಂತ ಸೈನಿಕನ ಕರ್ತವ್ಯ ಎಂದು ತಿಳಿಸಿದರು. 

Video Top Stories