Asianet Suvarna News Asianet Suvarna News

ರಾಜಸ್ಥಾನ ವಿಧಾನಸಭೆಯಲ್ಲಿ ರೆಡ್‌ ಡೈರಿ ಕೋಲಾಹಲ: ಸಿಎಂ ವಿರುದ್ದ ಡೈರಿ ಪ್ರದರ್ಶಿಸಿದ ಮುಖಂಡ..!

ರಾಜಸ್ಥಾನ ವಿಧಾನಸಭಾ ಸದನದಲ್ಲಿ ರೆಡ್‌ ಡೈರಿಯನ್ನು ಮಾಜಿ ಸಚಿವ ಪ್ರದರ್ಶಿಸಿದ್ದಾರೆ. ಹೀಗಾಗಿ ಸದನದಿಂದಲೇ ರಾಜೇಂದ್ರ ಸಿಂಗ್‌ರನ್ನು ಮಾರ್ಷಲ್‌ಗಳು ಹೊರದಬ್ಬಿದ್ದಾರೆ.

ರಾಜಸ್ಥಾನ ವಿಧಾನಸಭಾ ಕಲಾಪದ ವೇಳೆ ಸಿಎಂ ವಿರುದ್ಧ ಶಾಸಕರೊಬ್ಬರು ರೆಡ್‌ ಡೈರಿಯನ್ನು(red dairy) ಪ್ರದರ್ಶಿಸಿದ್ದಾರೆ. ಹೀಗಾಗಿ ಅವರನ್ನು ಸದನದಿಂದಲೇ ಕಿಕ್‌ಔಟ್‌ ಮಾಡಲಾಗಿದೆ. ಮೊದಲು ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು. ಈಗ ಸದನದಿಂದಲೇ ಅಮಾನತು ಮಾಡಲಾಗಿದೆ. ಸಿಎಂ ಅಶೋಕ್‌ ಗೆಹ್ಲೋಟ್‌(Ashok Gehlot) ವಿರುದ್ಧವೇ ಉಚ್ಛಾಟಿತ ಸಚಿವ ರಾಜೇಂದ್ರ ಸಿಂಗ್‌ ತಿರುಗಿ ಬಿದ್ದಿದ್ದಾರೆ. ಸದನದಲ್ಲಿ ರೆಡ್‌ ಡೈರಿ ಪ್ರದರ್ಶಿಸಿದ್ದಕ್ಕೆ ಅವರನ್ನು ಸದನದಿಂದಲೇ ಉಚ್ಛಾಟನೆ ಮಾಡಲಾಗಿದೆ. ಅಲ್ಲದೇ ಮಾರ್ಷಲ್‌ಗಳು ಅವರನ್ನು ಹೊರಹಾಕಿದ್ದಾರೆ. ಕಾಂಗ್ರೆಸ್‌ ನಾಯಕರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಹ ರಾಜೇಂದ್ರ ಸಿಂಗ್‌(Rajendra Singh) ಆರೋಪ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ನಡೆಯುತ್ತಾ ಚುನಾವಣೆ ?: 5 ವರ್ಷದಿಂದ ಚುನಾಯಿತ ಸರ್ಕಾರವೇ ಇರಲಿಲ್ಲ..!

Video Top Stories