ಮೋದಿ ಬಂದ್ರೆ ಟ್ರಾಫಿಕ್‌ ಜಾಮ್‌ ಆಗುತ್ತೆ, ಸೋನಿಯಾ, ರಾಹುಲ್‌ ಗಾಂಧಿ ಬಂದ್ರೆ ಆಗಲ್ವಾ: ಆರ್‌. ಅಶೋಕ್‌ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋದಿಂದ ಖಂಡಿತವಾಗಿಯೂ ಬಿಜೆಪಿಗೆ ಹೆಚ್ಚು ಮತಗಳು ಬರಲಿವೆ ಎಂದು ಆರ್‌. ಅಶೋಕ್‌ ಹೇಳಿದ್ದಾರೆ.

First Published May 6, 2023, 1:27 PM IST | Last Updated May 6, 2023, 1:27 PM IST

ಬೆಂಗಳೂರು: ಇಂದು ಪ್ರಧಾನಿ ಮೋದಿ ರಾಜ್ಯ ರಾಜಧಾನಿಯಲ್ಲಿ ರೋಡ್ ಶೋ ನಡೆಸುತ್ತಿದ್ದು, ಇದಕ್ಕಾಗಿ ಮಾಡಿರುವ ಸಿದ್ಧತೆಯನ್ನು ನೋಡಲು ಸಚಿವರೂ ಹಾಗೂ ಶಾಸಕರಾದ ಆರ್‌. ಅಶೋಕ್‌ ಸೌತ್‌ ಎಂಡ್‌ ಸರ್ಕಲ್‌ಗೆ ಬಂದಿದ್ದರು. ಈ ವೇಳೆ ಅವರು ಮಾತನಾಡಿ, ಬೆಂಗಳೂರಿನ ಜನ ಪ್ರಧಾನಿ ಮೋದಿಗೆ ಅಭೂತಪೂರ್ವ ಸ್ವಾಗತ ಕೋರುತ್ತಿದ್ದಾರೆ. ಸಾಗರದ ರೀತಿ ಜನ ಹರಿದು ಬರುತ್ತಿದ್ದಾರೆ. ಕಾರ್ಯಕರ್ತರಿಗಿಂತ ಜಾಸ್ತಿ ಸಾರ್ವಜನಿಕರೇ ಬರುತ್ತಿದ್ದಾರೆ. ಬೆಂಗಳೂರಿನ ಎಲ್ಲಾ ಕ್ಷೇತ್ರಕ್ಕೂ ಮೋದಿ ಸುನಾಮಿ ಬರುತ್ತಿದೆ. ಇದರಿಂದ ಪ್ರತಿ ಕ್ಷೇತ್ರದಲ್ಲೂ ಮತಗಳು ಜಾಸ್ತಿ ಆಗಲಿವೆ. ಕಾಂಗ್ರೆಸ್‌ನವರು ಮೋದಿ ಬಂದ್ರೆ ಟ್ರಾಫಿಕ್‌ ಜಾಮ್‌ ಆಗುತ್ತದೆ ಎನ್ನುತ್ತಾರೆ. ಅದೇ ಅವರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಂದ್ರೆ ಆಗಲ್ವಾ ಎಂದು ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ. 

ಇದನ್ನೂ ವೀಕ್ಷಿಸಿ: ಒಂದೊಂದು ರೋಡ್‌ ಶೋ ಜನರ ಮೇಲೆ ಬಹಳ ಪರಿಣಾಮ ಬೀರುತ್ತೆ: ಸುರೇಶ್‌ ಕುಮಾರ್‌

Video Top Stories