AAP vs BJP: 1 ಓಟಿಗಾಗಿ ರಣಾರಂಗವಾದ ದೆಹಲಿ ಮಹಾನಗರ ಪಾಲಿಕೆ; 3ನೇ ದಿನವೂ ಹೊಡೆದಾಟ, ಬಡಿದಾಟ
ಪ್ರಮುಖ ಮುನ್ಸಿಪಲ್ ಸಮಿತಿಯ ಆರು ಸದಸ್ಯರ ಚುನಾವಣೆಯಲ್ಲಿ ಒಂದು ಮತವನ್ನು ಮೇಯರ್ ಅಸಿಂಧು ಎಂದು ಘೋಷಿಸಿದರು. ಮೇಯರ್ ಕ್ರಮದ ನಂತರ ಬಿಜೆಪಿ ಮತ ಎಣಿಕೆಗೆ ಅಡ್ಡಿಪಡಿಸಿತು.
ನವದೆಹಲಿ (ಫೆಬ್ರವರಿ 25, 2023): ದೆಹಲಿಯ ಅಭಿವೃದ್ಧಿ ಚರ್ಚಿಸಬೇಕಾದ ಮಹಾನಗರ ಪಾಲಿಕೆಯ ಸದಸ್ಯರ ನಡುವಿನ ಹೊಡೆದಾಟ ಶುಕ್ರವಾರವೂ ಮುಂದುವರೆದಿದ್ದು, ಪುರುಷ ಮಹಿಳೆ ಎಂಬ ಭೇದವಿಲ್ಲದೇ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ವೇದಿಕೆ ಮೇಲಿದ್ದವರನ್ನು ಅಲ್ಲಿಂದ ತಳ್ಳಿ ಬೀಳಿಸಿದ್ದಾರೆ. ಕೈಗೆ ಸಿಕ್ಕ ಚಪ್ಪಲಿ, ಬಾಟಲಿ, ತಿಂದು ಬಿಟ್ಟವಸ್ತುಗಳನ್ನು ಪರಸ್ಪರ ಎಸೆದುಕೊಂಡಿದ್ದಾರೆ. ಪ್ರಮುಖ ಮುನ್ಸಿಪಲ್ ಸಮಿತಿಯ ಆರು ಸದಸ್ಯರ ಚುನಾವಣೆಯಲ್ಲಿ ಒಂದು ಮತವನ್ನು ಮೇಯರ್ ಅಸಿಂಧು ಎಂದು ಘೋಷಿಸಿದರು. ಮೇಯರ್ ಕ್ರಮದ ನಂತರ ಬಿಜೆಪಿ ಮತ ಎಣಿಕೆಗೆ ಅಡ್ಡಿಪಡಿಸಿತು. ಆದರೆ, ಅಸಿಂಧು ಮತವಿಲ್ಲದೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಮೇಯರ್ ಹೇಳಿದರು. ನಂತರ ಪಾಲಿಕೆಯಲ್ಲಿ ಗದ್ದಲ ಉಂಟಾಗಿದೆ.