Asianet Suvarna News Asianet Suvarna News

ಕಾರವಾರಾ-ಅಂಕೋಲಾದಲ್ಲಿ ನಮೋ ಮತಬೇಟೆ: ಪ್ರಧಾನಿಗೆ ಸಿದ್ಧವಾಗಿದೆ ಭೂರಿ ಭೋಜನ!

ಪ್ರಧಾನಿ ಮೋದಿ ಇಂದು ಕಾರವಾರ- ಅಂಕೋಲಾದಲ್ಲಿ ಮತಬೇಟೆ ನಡೆಸಲಿದ್ದು, ಅವರ ಜೊತೆ 50 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಉತ್ತರ ಕನ್ನಡ: ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ಮೋದಿ ಕಾರವಾರ-ಅಂಕೋಲಾದಲ್ಲಿ ಮತಬೇಟೆ ನಡೆಸಲಿದ್ದಾರೆ. ಅಂಕೋಲಾ ಕ್ಷೇತ್ರದಲ್ಲಿ ಹಬ್ಬದ ವಾತಾವರಣವಿದ್ದು, ಮೋದಿ ಜೊತೆ 50 ಜನರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಶಾಸಕಿ ರೂಪಾಲಿ ನಾಯ್ಕ್‌ ನೇತೃತ್ವದಲ್ಲಿ ಖಾದ್ಯವನ್ನು ರೆಡಿ ಮಾಡಿಸಲಾಗುತ್ತಿದೆ. ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ್‌ ಮಾತನಾಡಿ, ಹಟ್ಟಿಕೇರಿಯಲ್ಲಿ ಸಮಾವೇಶವಿದೆ. ನಂತರ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭೋಜನಕ್ಕೆ ಚಪಾತಿ, ಅನ್ನ, ಸಂಬಾರ್‌, ಮೊಸರು, ಪನ್ನೀರ್‌ ಮಸಾಲ, ಮಶ್ರೂಮ್‌ ಮಸಾಲ, ಖರ್ಜೂರ ಸ್ವೀಟ್‌, ವಿಶೇಷವಾಗಿ ದೊರೆಯುವ ಸೊಪ್ಪುಗಳ ಬಾಜಿ ತಯಾರಿಸಲಾಗುತ್ತದೆ. ಅಲ್ಲದೇ ಮೋದಿಗೆ ಶಾಲು, ಪೇಟ, ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಉಡುಗೊರೆ ಕೊಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ವೀಕ್ಷಿಸಿ: ಮಹಾ ಬ್ಯಾಟಲ್‌ನಲ್ಲಿ 'ನಮೋ' ಹವಾ, ರಾಜ್ಯದ ಮೂರು ಕಡೆ ಇಂದು ಪ್ರಧಾನಿ ಮತಬೇಟೆ..!

Video Top Stories