ಮಹಾ ಬ್ಯಾಟಲ್‌ನಲ್ಲಿ 'ನಮೋ' ಹವಾ, ರಾಜ್ಯದ ಮೂರು ಕಡೆ ಇಂದು ಪ್ರಧಾನಿ ಮತಬೇಟೆ..!

ಇಂದು ಪ್ರಧಾನಿ ಮೋದಿ ಕರಾವಳಿ, ಕಿತ್ತೂರು ಕರ್ನಾಟಕದಲ್ಲಿ ಮತಯಾಚನೆ ಮಾಡಲಿದ್ದು,  ಮಂಗಳೂರು, ಬೆಳಗಾವಿ , ಉತ್ತರ ಕನ್ನಡದಲ್ಲಿ  ಪ್ರಚಾರ ನಡೆಸಲಿದ್ದಾರೆ. 

First Published May 3, 2023, 9:29 AM IST | Last Updated May 3, 2023, 9:29 AM IST

ಇಂದು ಪ್ರಧಾನಿ ಮೋದಿ ಕರಾವಳಿ, ಕಿತ್ತೂರು ಕರ್ನಾಟಕದಲ್ಲಿ ಮತಯಾಚನೆ ಮಾಡಲಿದ್ದು,  ಮಂಗಳೂರು, ಬೆಳಗಾವಿ , ಉತ್ತರ ಕನ್ನಡದಲ್ಲಿ  ಪ್ರಚಾರ ನಡೆಸಲಿದ್ದಾರೆ. ಮಂಗಳೂರಿನ ಕೊಲ್ನಾಡಿಯಲ್ಲಿ ಬೆಳಗ್ಗೆ11ಕ್ಕೆ, ಮಧ್ಯಾಹ್ನ 1.15ಕ್ಕೆ ಅಂಕೋಲಾದ ಹಟ್ಟಿಕೇರಿಯಲ್ಲಿ, ಮಧ್ಯಾಹ್ನ 3.15ಕ್ಕೆ  ಬೈಲಹೊಂಗಲದಲ್ಲಿ ಪ್ರಧಾನಿ ಮೋದಿ ಕ್ಯಾಂಪೇನ್ ಮಾಡಲಿದ್ದಾರೆ. ಇನ್ನುಬೆಳಗ್ಗೆ 11 ಗಂಟೆಗೆ ಕೊಲ್ನಾಡಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ದಕ್ಷಿಣ ಕನ್ನಡ, ಉಡುಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಅದಲ್ಲದೆ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಧಾನಿಯೊಬ್ಬರು ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದು ಈ ಐತಿಹಾಸಿಕ ಸಮಾವೇಶಕ್ಕೆಅಂಕೋಲಾ ಸಾಕ್ಷಿಯಾಗಲಿದೆ. ಹಾಗೇ ಬೆಳಗಾವಿಯ ಕುಡಚಿಯಲ್ಲಿ ಸಮಾವೇಶ ನಡೆಸಿದ್ದ ಪ್ರಧಾನಿ  ಮತ್ತೆ ಜಿಲ್ಲೆಯಬೈಲಹೊಂಗಲದಲ್ಲಿ ಪ್ರಚಾರ ನಡೆಸುವ ಮೂಲಕ ಬೆಳಗಾವಿಯ 8 ಕ್ಷೇತ್ರದ ಮೇಲೆ ಗುರಿಯಿಟ್ಟಿದ್ದಾರೆ.  

Video Top Stories