Asianet Suvarna News Asianet Suvarna News

ಕನ್ನಡದ ಕಿಚ್ಚು ಹುಟ್ಟಿದ್ದು ಹೇಗೆ?: ಚಳವಳಿ ಬಗ್ಗೆ ವಾಟಾಳ್ ನಾಗರಾಜ್ ಹೇಳಿದ್ದೇನು?

ಮೊದಲು ಎಲ್ಲಾ ಕನ್ನಡ ವಿರೋಧಿ ನಾಮಫಲಕಗಳನ್ನು ಕಿತ್ತು ಹಾಕಬೇಕು ಎಂದು ಚಿಕ್ಕಲಾಲ್‌ ಭಾಗದಿಂದ ಹೋರಾಟವನ್ನು ಆರಂಭ ಮಾಡಿದ್ದೆವು ಎಂದು ವಾಟಾಳ್ ನಾಗರಾಜ್ ಹೋರಾಟ ನೆನಪು ಮೆಲುಕು ಹಾಕಿದರು.

ರಸ್ತೆ ರಸ್ತೆಯಲ್ಲಿ, ಮೂಲೆ ಮೂಲೆಯಲ್ಲಿ ಕನ್ನಡ ನಾಮಫಲಕವಿಲ್ಲ, ಕನ್ನಡದ ಬಗ್ಗೆ ಕೇಳುವವರಿಲ್ಲ ಎಂದು ಹೋರಾಟವನ್ನು ಆರಂಭ ಮಾಡಿದಾಗ, ಜೊತೆಯಲ್ಲಿ ಅಂದು 50 ಜನ ಇದ್ರು ಎಂದು ಅನಿಸುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು. ಯಾವಾಗ ರಸ್ತೆ ರಸ್ತೆಯಲ್ಲಿ ಬೇರೆ ಭಾಷೆಗಳ ನಾಮಫಲಕಗಳನ್ನು ಕಿತ್ತು ಹಾಕಿ ಚಳವಳಿಗೆ ರೂಪು ರೇಷೆಯನ್ನು ಕೊಟ್ಟೆವು, ಆಗ ಸಾವಿರಾರು ಜನ ಬಂದ್ರು. ಕನ್ನಡ ಚಳವಳಿ ಹುಚ್ಚು ಎದ್ದು ಬಿಡ್ತು. 60ರ ದಶಕದಲ್ಲಿ ಆರಂಭವಾದ ಚಳವಳಿ ನಿಲ್ಲಲ್ಲೇ ಇಲ್ಲ, ಎಲ್ಲೂ ಕಡಿಮೆ ಆಗಿಲ್ಲ ಎಂದರು.

'ಬಂದೂಕಿನಿಂದ ಏಟು ಬಿದ್ದರೂ, ನನ್ನ ರಕ್ತ ಕನ್ನಡ': ವಾಟಾಳ್ ನಾಗರಾಜ್ 'ಚಳವಳಿ' ನೆನಪು

Video Top Stories