'ಬಂದೂಕಿನಿಂದ ಏಟು ಬಿದ್ದರೂ, ನನ್ನ ರಕ್ತ ಕನ್ನಡ': ವಾಟಾಳ್ ನಾಗರಾಜ್ 'ಚಳವಳಿ' ನೆನಪು
ಭಾಷಣದಿಂದ ಏನು ಸಾಧ್ಯವಿಲ್ಲ, ಹೋರಾಟಕ್ಕೆ ಇಳಿಬೇಕು. ಚಳವಳಿಯನ್ನು ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
1962ರಲ್ಲಿ ಅಲಂಕಾರ್ ಟಾಕೀಸ್'ಗೆ ನುಗ್ಗಿ ಕನ್ನಡ ಸಿನಿಮಾ ಹಾಕಿ ಎಂದು ಗಲಾಟೆ ಮಾಡಿದ್ವಿ. ಅವತ್ತು ನನ್ನನ್ನು ಬಂಧನ ಮಾಡಲಾಗುತ್ತದೆ. ಲೂಯಿಸ್ ಎನ್ನುವ ಪೊಲೀಸ್ ಅಧಿಕಾರಿ ಬಂಧನ ಮಾಡಿ, ಬೂಟ್ಸ್‌ನಲ್ಲಿ ಹೊಡೆದ್ರು ಎಂದು ವಾಟಾಳ್ ನಾಗರಾಜ್ ಹೇಳಿದರು. ಬೂಟ್ಸ್ ಏಟು ಅಲ್ಲ ಬಂದೂಕಿನಿಂದ ಏಟು ಬಿದ್ದರೂ, ನನ್ನ ರಕ್ತ ಕನ್ನಡ ಎಂದು ಹೇಳಿ, ಪೊಲೀಸ್ ಅಧಿಕಾರಿಗೂ ನನಗೂ ವಾದ ನಡೆಯುತ್ತದೆ. ಪೊಲೀಸ್ ಅಧಿಕಾರಿ ಎಂದು ಸುಮ್ಮನೆ ಬಿಟ್ಟೆ ಎಂದು ಹೇಳಿದರು. ಆ ಮನುಷ್ಯ ದುಡುಕಿದ್ದಾನೆ ಎಂದು ನಾನು ದುಡುಕಿ ಚಪ್ಪಲಿಯಲ್ಲಿ ಹೊಡೆಯುವುದನ್ನು ಮಾಡಲು ಹೋಗಲಿಲ್ಲ. ಎರಡು ದಿನ ನಮ್ಮನ್ನು ಲಾಕ್ ಅಪ್'ನಲ್ಲಿ ಇಟ್ಟರು. ನಾನು ಚಳವಳಿಯನ್ನು ಆರಂಭಿಸಿದ ಮೇಲೆ 15 ವರ್ಷ ಬರೀ ಲಾಕಪ್‌ನಲ್ಲಿ ಇಟ್ಟರು. ಎಷ್ಟು ಕೆಟ್ಟದಾಗಿ ನಡೆದುಕೊಂಡ್ರು ಅಂದ್ರೆ ವಾಟಾಳ್ ನಾಗರಾಜ್ ಜೊತೆ ಯಾರನ್ನು ಕುರಿಸಬೇಡಿ, ಮಾತಾಡ್ತಾ ಕುಳಿತು ಬಿಡುತ್ತಾರೆ ಎಂತಿದ್ದರು ಎಂದು ಹೇಳಿದರು. ಕರ್ನಾಟಕದಲ್ಲಿ ಹೋರಾಟ ಮಾಡಿದವರಲ್ಲಿ ಯಾರನ್ನು ಲಾಕಪ್‌ನಲ್ಲಿ ಹಾಕಿರಲಿಲ್ಲ, ಆದ್ರೆ ನನ್ನನ್ನು ಹಾಕಿದ್ದಾರೆ ಎಂದರು.