ಪ್ರಚಾರ ಕಣಕ್ಕೆ ಮೋದಿ ಎಂಟ್ರಿ : ಚನ್ನಪಟ್ಟಣದಲ್ಲಿ ಮೊದಲ ರೋಡ್ ಶೋ

ಚುನಾವಣಾ ಪ್ರಚಾರದ ಅಂಗಳಕ್ಕೆ ಮೋದಿ ಎಂಟ್ರಿ
ಏ.27ರಿಂದ ಪ್ರಚಾರ ಕಣಕ್ಕೆ ಧುಮುಕಲಿರುವ ಮೋದಿ
ಚನ್ನಪಟ್ಟಣದ ಮೂಲಕ ಮೋದಿ ರ್‍ಯಾಲಿ ಆರಂಭ

First Published Apr 20, 2023, 11:48 AM IST | Last Updated Apr 20, 2023, 11:54 AM IST

ಬೆಂಗಳೂರು: ರಾಜ್ಯದ ವಿಧಾನಸಭಾ ಚುನಾವಣೆ ಹತ್ತಿರದಲ್ಲೇ ಇರುವ ಹಿನ್ನೆಲೆ ಪ್ರಚಾರದ ಅಂಗಳಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಡಲಿದ್ದಾರೆ. ಏ.27ರಿಂದ ಅವರು ಮೊದಲ ಪ್ರಚಾರದ ಕಣಕ್ಕೆ ಧುಮುಕಲಿದ್ದಾರೆ. ಚನ್ನಪಟ್ಟಣದ ಮೂಲಕ ಮೋದಿ ರ್‍ಯಾಲಿ ಆರಂಭವಾಗಲಿದೆ. ಇನ್ನೂ ಐದು ಸಾವಿರ ಕಡೆ ಎಲ್‌ಇಡಿ ಸ್ಕ್ರೀನ್‌    ಮೂಲಕ ಪ್ರಸಾರಕ್ಕೆ ಪ್ಲ್ಯಾನ್‌ ಸಹ ಮಾಡಲಾಗಿದೆ. ಈ ಮೂಲಕ ಹಳ್ಳಿ-ಹೋಬಳಿಗೂ ಮೋದಿ ಪ್ರಚಾರ ತಲುಪಿಸುವುದು ಬಿಜೆಪಿ ಗುರಿಯಾಗಿದೆ. ಕನಿಷ್ಠ ಮೂರು ಜಿಲ್ಲೆಯಗಳನ್ನು ಟಾರ್ಗೆಟ್‌ ಮಾಡಿ ಪ್ರಚಾರವನ್ನು ಮಾಡಲಾಗುತ್ತದೆ. ಪ್ರತಿ ದಿನ ಮೂರು ರ್‍ಯಾಲಿ ಮೂಲಕ ಮೋದಿ ಮತಬೇಟೆ ಮಾಡಲಿದ್ದಾರೆ. ಹಳೇ ಮೈಸೂರು ಭಾಗ ಕೇಸರಿ ಕಲಿಗಳ ಪ್ರಮುಖ ಟಾರ್ಗೆಟ್‌ ಆಗಿದೆ. 

ಇದನ್ನೂ ವೀಕ್ಷಿಸಿ: ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ: ಹೈಕಮಾಂಡ್‌ ಲೆಕ್ಕಾಚಾರವೇನು?

Video Top Stories