ರಾಜ್ಯದಲ್ಲಿ ಮೋದಿ ಸವಾರಿ.. ಗೆಲ್ಲುವುದೊಂದೇ ಗುರಿ..ಬಸವಣ್ಣನ ಕರ್ಮಭೂಮಿಯಿಂದ ಮೋದಿ ರಣಕಹಳೆ!
ಕರುನಾಡಲ್ಲಿ ಮೋದಿ ಹವಾ ಶುರುವಾಗಿದ್ದು, ರಾಜ್ಯ ರಾಜಕಾರಣಕ್ಕೆ, ರೋಚಕ ರಂಗು ಬಂದಿದೆ. ರಾಜ್ಯ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿರುವ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕ ಕುರುಕ್ಷೇತ್ರಕ್ಕೆ ರಂಗಪ್ರವೇಶ ಮಾಡಿರುವ ಮೋದಿ ಮ್ಯಾರಥಾನ್ ರ್ಯಾಲಿ ನಡೆಸಿ, ಒಂದೇ ದಿನ 3 ಸಮಾವೇಶದಲ್ಲಿ ಪಾಲ್ಗೊಂಡರು.
ಕರುನಾಡಲ್ಲಿ ಮೋದಿ ಹವಾ ಶುರುವಾಗಿದ್ದು, ರಾಜ್ಯ ರಾಜಕಾರಣಕ್ಕೆ, ರೋಚಕ ರಂಗು ಬಂದಿದೆ. ರಾಜ್ಯ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿರುವ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕ ಕುರುಕ್ಷೇತ್ರಕ್ಕೆ ರಂಗಪ್ರವೇಶ ಮಾಡಿರುವ ಮೋದಿ ಮ್ಯಾರಥಾನ್ ರ್ಯಾಲಿ ನಡೆಸಿ, ಒಂದೇ ದಿನ 3 ಸಮಾವೇಶದಲ್ಲಿ ಪಾಲ್ಗೊಂಡರು. ಮೋದಿ ಹೋದೆಲೆಲ್ಲಾ ಅವರಿಗೆ ಸಿಕ್ಕಿದ್ದು ಅದ್ಧೂರಿ ಸ್ವಾಗತ.. ಇನ್ನು, ಒಟ್ಟು 6 ಸಮಾವೇಶ, 2 ರೋಡ್ ಶೋ ಮಾಡೋದಕ್ಕೆ ತಯಾರಿ ನಡೆದಿದ್ದು, ನಿನ್ನೆ ಬೆಳಗ್ಗೆ ಹುಮ್ನಾಬಾದ್, ಮಧ್ಯಾಹ್ನ ವಿಜಯಪುರ, ಸಂಜೆ ಕುಡಚಿಗೆ ಧಾವಿಸಿದ ಮೋದಿ ಬೆಂಗಳೂರಲ್ಲಿ ಅದ್ಧೂರಿ ಶೋ ನಡೆಸಿದರು. ಇನ್ನು ವಿಜಯಪುರ ಕ್ಷೇತ್ರದಲ್ಲಿ ಮೋದಿ ಸಮಾವೇಶಕ್ಕೆ ಪ್ಲಾನ್ ಹಾಕಿಕೊಂಡಿದ್ದು ಯಾಕೆ ಎನ್ನುವ ಸಹಜ ಪ್ರಶ್ನೆ ಮೂಡಬಹುದು.ಮುಖ್ಯವಾದ ಕಾರಣ ಅಂದರೆ, ಹಿಂದೂ ಅಸ್ತ್ರದ ಜೊತೆಗೆ ಲಿಂಗಾಯತ ಮೀಸಲಾತಿ ಅಸ್ತ್ರವನ್ನ ಪ್ರಯೋಗಿಸೋದು. ವಿಜಯಪುರದಲ್ಲಿ ಮಾತಾಡುವಾಗ ಲಿಂಗಾಯತ ಸಮುದಾಯವನ್ನೇ ಟಾರ್ಗೆಟ್ ಮಾಡಿ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಹಾಗೇ ಇತ್ತು.