ಬಿಜೆಪಿಯಲ್ಲಿ ಶುರುವಾಯ್ತು ಜಂಪಿಂಗ್....ಇದು ಗೂಡು ಬಿಟ್ಟ ಹಕ್ಕಿಗಳ ನಿಗೂಢ ಕಥಾನಕ..!

ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಕ್ಷಣದಿಂದ  ಬದಲಾವಣೆಗಳು, ಚಿತ್ರವಿಚಿತ್ರ ಘಟನೆಗಳನ್ನು ಕಾಣಬಹುದಾಗಿದೆ. ಮೂರು ಪಕ್ಷಗಳೂ ಟಿಕೆಟ್ ಘೋಷಣೆ ಮಾಡುತ್ತಿದ್ದ ಹಾಗೇ, ಅಸಮಾಧಾನಿತರು ದಂಡೆದ್ದು ನಿಂತಿದ್ದಾರೆ.. 

First Published Apr 14, 2023, 3:38 PM IST | Last Updated Apr 14, 2023, 3:38 PM IST

ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಕ್ಷಣದಿಂದ  ಬದಲಾವಣೆಗಳು, ಚಿತ್ರವಿಚಿತ್ರ ಘಟನೆಗಳನ್ನು ಕಾಣಬಹುದಾಗಿದೆ. ಮೂರು ಪಕ್ಷಗಳೂ ಟಿಕೆಟ್ ಘೋಷಣೆ ಮಾಡುತ್ತಿದ್ದ ಹಾಗೇ, ಅಸಮಾಧಾನಿತರು ದಂಡೆದ್ದು ನಿಂತಿದ್ದಾರೆ.. ಅಸಮಾಧಾನದ ಬಡಬಾಗ್ನಿಯನ್ನ ಹೊಸ ಹಾಕ್ತಿದ್ದಾರೆ.ಇನ್ನು ಅನೇಕ  ಟಿಕೆಟ್ ಆಕಾಂಕ್ಷಿಗಳಿಗೆ ನಿರಾಸೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸಂಬಂಧಿ ಎನ್ಆರ್ ಸಂತೋಷ್‌ಗೆ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ಇದರಿಂದ ಅಸಮಾಧಾನಗೊಂಡ  ಸಂತೋಷ್ ಬೆಂಬಲಿಗರ   ಸಭೆಯಲ್ಲಿ ಕಣ್ಣೀರು ಹಾಕಿದ್ದರು, ಅಲ್ಲದೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ತೀರ್ಮಾನ ಮಾಡಿದಾರೆ. ನಿರಾಸೆ  ಸಾಲಿಗೆ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ  ಕೂಡ ಸೇರುತ್ತಾರೆ. ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ..

Video Top Stories