Asianet Suvarna News Asianet Suvarna News

ಪಾಕಿಸ್ತಾನ್‌ ಜಿಂದಾಬಾದ್‌ ಅಂತಾ ಕೂಗಿದ್ರೆ ತನಿಖೆಯಾಗಲಿ: ನಾಸಿರ್‌ ಹುಸೇನ್‌

ವಿಧಾನಸೌಧದ ಎದುರು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗಿದ್ರೆ ಆ ಬಗ್ಗೆ ತನಿಖೆಯಾಗಲಿ ಎಂದು ನೂತನ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
 

ಬೆಂಗಳೂರು (ಫೆ.27): ಅಲ್ಲಿ ನಾನು ಇರುವವರೆಗೂ ನಾಸಿರ್ ಹುಸೇನ್ ಜಿಂದಾಬಾದ್ ಅಂತಾ ಹೇಳುತ್ತಿದ್ದರು. ನಾನಿರುವಾಗ ಪಾಕಿಸ್ತಾನ ಜಿಂದಾಬಾದ್ ಅನ್ನೋ ಕೂಗು ಕೇಳಿಲ್ಲ ಎಂದು ನೂತನ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಯ ವಿವಾದದ ಕುರಿತು ಮಾತನಾಡಿದ್ದಾರೆ.

ಒಂದು ವೇಳೆ ಈ ರೀತಿ ಘೋಷಣೆ ಕೂಗಿದ್ದರೆ, ಆ ಬಗ್ಗೆ ತನಿಖೆಯಾಗಲಿ. ಯಾರು ಕೂಗಿದ್ದು, ಅವರ ಉದ್ದೇಶ ಏನು ಎಂಬ ಬಗ್ಗೆ ತನಿಖೆಯಾಗಲೇಬೇಕು. ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡಿದ್ದಕ್ಕೂ ಕಾರಣವಿದೆ ಎಂದ ನಾಸಿರ್‌ ಹುಸೇನ್‌, ತುಂಬಾ ಜನರಿದ್ದಾಗ ನಾನು ಸ್ವಲ್ಪ ನಡೀರಯ್ಯಾ ಎಂದಿದ್ದೀನಿ ಅಷ್ಟೇ. ರಾ ಫೂಟೇಜ್ ಕೂಡ ನೋಡಿದ್ದೇನೆ ಪಾಕಿಸ್ತಾನ ಜಿಂದಾಬಾದ್ ಅನ್ನೋ ಕೂಗು ಕೇಳಿಸಿಲ್ಲ ಎಂದಿದ್ದಾರೆ.

ವರದಿಗಾರನ ಪ್ರಶ್ನೆಗೆ 'ಏಯ್ ನಡಿಯೋ ಆಚೆ..' ಎಂದ ನಾಸಿರ್‌ ಹುಸೇನ್‌!

ತನಿಖೆಯಲ್ಲಿ ಸುಳ್ಳು ಎಂದಾದಲ್ಲಿ ವೀಡಿಯೋ ಎಲ್ಲಿಂದ ಬಂತು ಅನ್ನೋದು ಕೂಡ ತನಿಖೆಯಾಗಬೇಕು. ಯಾರೇ ದೇಶ ದ್ರೋಹದ ಕೆಲಸ ಮಾಡಿದ್ದರೂ ಸೂಕ್ತ ಕ್ರಮ ಆಗಬೇಕು. ತನಿಖೆಗೆ ಮುಂಚೆನೆ ಬಿಜೆಪಿಯವರು ಪ್ರತಿಭಟಿಸುವುದು ಸರಿಯಲ್ಲ. ಪೊಲೀಸರು ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.