ನನ್ನ ಕ್ಷೇತ್ರದ ಮತದಾರರೇ ನನಗೆ ದೇವರು: ಮುನಿರತ್ನ

ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಪ್ರಚಾರ
ಜ್ಞಾನಭಾರತಿ ವಾರ್ಡ್‌ನಲ್ಲಿ ಭರ್ಜರಿ ಕ್ಯಾಂಪೇನ್‌
ಮನೆ ಮನೆಗೆ ತೆರಳಿ ಮತಯಾಚಿಸಿದ ಮುನಿರತ್ನ

First Published Apr 25, 2023, 4:14 PM IST | Last Updated Apr 25, 2023, 4:14 PM IST

ಬೆಂಗಳೂರು: ಆರ್‌ ಆರ್‌ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಜ್ಞಾನಭಾರತಿ ವಾರ್ಡ್‌ನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ದ್ವಿಚಕ್ರ ವಾಹನದಲ್ಲಿ ತೆರಳಿ ಮುನಿರತ್ನ ಮತಯಾಚಿಸಿದ್ದಾರೆ. ಇದೇ ವೇಳೆ ಬಿಜೆಪಿಗೆ ಸೇರ್ಪಡೆಯಾದ ನಾಯಕರನ್ನು ಸ್ವಾಗತಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನ್ನ ಮತದಾರರೇ ನನಗೆ ದೇವರು. ಈ ಬಾರಿ ನಾವೇ ಸರ್ಕಾರ ರಚನೆ ಮಾಡುತ್ತೇವೆ. ನನ್ನ ಕ್ಷೇತ್ರದ ಮತದಾರ ದೇವರುಗಳು  ನೀನು ಒಳ್ಳೆ ಕೆಲಸ ಮಾಡಿದ್ದೀಯಾ, ಗೆದ್ದು ಬಾ ಸಾಕು ಎಂದು ಹೇಳುತ್ತಿದ್ದಾರೆ. ನಿನ್ನಂತ ಕೆಲಸಗಾರನನ್ನು ನಾವು ಕಳೆದುಕೊಳ್ಳಲು ಸಿದ್ದರಿಲ್ಲ. ನೀನು ಇಲ್ಲ ಅಂದ್ರೆ, ಈ ಕ್ಷೇತ್ರ 20 ವರ್ಷ ಹಿಂದಕ್ಕೆ ಹೋಗುತ್ತದೆ ಎಂದು ಮತದಾರರು ನನಗೆ ಹೇಳಿದ್ದಾರೆಂದು ಮುನಿರತ್ನ ಹೇಳಿದ್ದಾರೆ.   

ಇದನ್ನೂ ವೀಕ್ಷಿಸಿ: ಲಿಂಗಾಯತ ಸಿಎಂ ಬಗ್ಗೆ ಮಾತಾಡಿ ಸಿದ್ದು ಸಂಕಷ್ಟದಲ್ಲಿದ್ದಾರೆ: ಸಿಎಂ

Video Top Stories