Asianet Suvarna News Asianet Suvarna News

ಸಿದ್ದು ಸಿಂಹಾಸನಕ್ಕೆ ಮುಡಾ ಕಂಟಕ, ರಾಜೀನಾಮೆ ನೀಡ್ತಾರಾ ಸಿಎಂ?

ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಶುದ್ಧ ಹಸ್ತ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಮುಡಾ ಅಕ್ರಮದ ಕಳಂಕ ಎದುರಾಗಿದೆ. ಹೈಕೋರ್ಟ್‌ ಮತ್ತು ಜನಪ್ರತಿನಿಧಿಗಳ ನ್ಯಾಯಾಲದ ತನಿಖೆ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

First Published Sep 25, 2024, 8:19 PM IST | Last Updated Sep 25, 2024, 8:19 PM IST

ಅವರದ್ದು 4 ದಶಕಗಳ ಸುದೀರ್ಘ ರಾಜಕೀಯ ಜೀವನ.. ಆ ನಾಲ್ಕು ದಶಕಗಳಲ್ಲಿ ಶುದ್ಧರಾಮಯ್ಯ ಅಂತಾನೇ ಹೆಸರು ಪಡೆದವರು ಸಿದ್ದರಾಮಯ್ಯ. ಆ ಕ್ಲೀನ್ ಇಮೇಜ್'ಗೆ ಈಗ ಅಂಟಿಕೊಂಡಿದೆ ಅತೀ ದೊಡ್ಡ ಕಳಂಕ. ಮುಡಾ ಅಕ್ರಮದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ ನೀಡಿದೆ. ಹಾಗಾದ್ರೆ ಸಿದ್ದರಾಮಯ್ಯನವರ ಸಿಂಹಾಸನಕ್ಕೆ ಕೊನೆಗೂ ಕಂಟಕ ಎದುರಾಗಿಯೇ ಬಿಡ್ತಾ..? ಪಟ್ಟ ಪದತ್ಯಾಗ ಮಾಡ್ತಾರಾ 'ಸಿಎಂ'ರಾಮಯ್ಯ..?

ಮುಡಾ ಹಗರಣದಲ್ಲಿ ಸಿಎಂಗೆ ಮತ್ತೆ ಶಾಕ್‌, ಲೋಕಾಯುಕ್ತ ತನಿಖೆಗೆ ಆದೇಶಿಸಿದ ಜನಪ್ರತಿನಿಧಿಗಳ ಕೋರ್ಟ್!

ಕುತೂಹಲಕ್ಕೆ ಕಾರಣವಾಗಿರೋದು ಅದೊಂದು ಪ್ರಶ್ನೆ.. ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ ಅನ್ನೋದು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊರಳಿಗೆ ಸುತ್ತಿಕೊಂಡಿರೋ ಮುಡಾ ಅಕ್ರಮದ ಉರುಳು ಬಿಗಿಯಾಗ್ತಾ ಇದೆ. ಪ್ರಕರಣದ ತನಿಖೆಗೆ ಹೈಕೋರ್ಟ್ ಆದೇಶ ನೀಡಿದೆ. ಇದ್ರ ಬೆನ್ನಲ್ಲೇ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ. ಅಷ್ಟಕ್ಕೂ ಪದತ್ಯಾಗ ಮಾಡಲೇಬೇಕಾದ ಅನಿವಾರ್ಯ ಸಿದ್ದರಾಮಯ್ಯನವ್ರಿಗೆ ಎದುರಾಯ್ತಾ..? ಸಿದ್ದು ರಾಜೀನಾಮೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಲುವೇನು..? ಮುಡಾ ಹಗರಣದಲ್ಲಿ ತಮ್ಮ ತನಿಖೆಗೆ ಆದೇಶ ನೀಡಿರೋ ಹೈಕೋರ್ಟ್ ತೀರ್ಪು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಗ್ ಶಾಕ್. ಇದ್ರ ಬೆನ್ನಲ್ಲೇ ಜನಪ್ರತಿನಿಧಿಗಳ ನ್ಯಾಯಾಲಯ ಕೂಡ ಮೈಸೂರು ಲೋಕಾಯುಕ್ತಕ್ಕೆ ತನಿಖೆ ನಡೆಸುವಂತೆ ಆದೇಶಿಸಿದೆ. ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡಲಿ ಅಂತ ಪ್ರತಿಪಕ್ಷಗಳು ಆಗ್ರಹಿಸ್ತಾ ಇವೆ.  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವಿಡಿಯೋದಲ್ಲಿದೆ.

Video Top Stories