ಮುಸ್ಲಿಮರ ಓಲೈಕೆಗಿಳಿದ ಎಂಟಿಬಿ ನಾಗರಾಜ್: ಹಿಂದುತ್ವ ಜಪದ ನಡುವೆ ಖವ್ವಾಲಿ ಆಯೋಜನೆ

ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮತ್ತು ಪುತ್ರ ನಿತೀಶ್ ಪುರುಷೋತ್ತಮ ಮುಂಬೈನಿಂದ ಖ್ಯಾತ ಕವ್ವಾಲಿ ಗಾಯಕರನ್ನ ಕರೆಸಿ ಅಯೋಜಿಸಿದ್ದ ಖವ್ವಾಲಿ ಕಾರ್ಯಕ್ರಮ ಇಡೀ ರಾತ್ರಿ ನಡೆದಿದೆ.

First Published Jan 17, 2023, 1:57 PM IST | Last Updated Jan 17, 2023, 1:56 PM IST

ಹೊಸಕೋಟೆ  (ಜ.17): ಉರ್ದುವಿನಲ್ಲೇ ಅಪ್ಪ- ಮಗ ಮುಸಲ್ಮಾನರನ್ನ ಆಕರ್ಷಿಸಿದರು. ಈದ್ಗಾ ಮೈದಾನದಲ್ಲಿ ಅಯೋಜನೆಗೊಂಡಿದ್ದ ಕಾರ್ಯಕ್ರಮವನ್ನ ಕೊನೆ ಕ್ಷಣದಲ್ಲಿ ರಾಜಕೀಯ ಕಾರ್ಯಕ್ರಮವೆಂದು ಆರೋಪಿಸಿ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಕಾರ್ಯಕ್ರಮವನ್ನ ಚೆನ್ನಬೈರೇಗೌಡ್ರ ಕ್ರೀಡಾಂಗಣದಲ್ಲಿ ಅಯೋಜಿಸಿದ್ದರು. ಮುಂಬೈನಿಂದ ಖ್ಯಾತ ಖವ್ವಾಲಿ ಗಾಯಕರನ್ನ ಕರೆಸಿ ಕಾರ್ಯಕ್ರಮ ಅಯೋಜಿಸಿದ್ದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮತ್ತು ಪುತ್ರ ನಿತೀಶ್ ಪುರುಷೋತ್ತಮ. ಇಡೀ ರಾತ್ರಿ ಕವ್ವಾಲಿ ನಡೆದಿದೆ.

ಈ ವೇಳೆ ಖವ್ವಾಲಿ ಹಾಡುತ್ತಿದ್ದ ಹಾಡುಗಾರನ ಮೇಲೆ ಹಣವನ್ನು ಮಳೆಯಂತೆ ಚೆಲ್ಲಲಾಗಿದೆ. ಆದರೆ, ಈ ಬಗ್ಗೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್‌ ತಾವು ಕೇವಲ ಕಾರ್ಯಕ್ರಮ ಆಯೋಜನೆ ಮಾಡಿದ್ದೆವು. ಅಲ್ಲಿದ್ದ ಹಾಡುಗಾರನ ಅಭಿಮಾನಿಗಳು ಖವ್ವಾಲಿ ಇಷ್ಟವಾಗಿ ಹತ್ತು ರೂ. ನೋಟುಗಳನ್ನು ಹಾಕಿದ್ದಾರೆ. ಇದರಲ್ಲಿ ನಮ್ಮ ಪಾತ್ರ ಏನಿಲ್ಲ ಎಂದರು.