ಅತ್ತ ಸಿಎಂ ದೆಹಲಿಗೆ ದೌಡು;ಇತ್ತ ಮಂತ್ರಿಗಿರಿಗಾಗಿ ರೇಣುಕಾಚಾರ್ಯ ಲಾಬಿ..!
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು, ನೆರೆ, ಅತಿವೃಷ್ಟಿಯಿಂದಾದ ನಷ್ಟ ಪರಿಹಾರವನ್ನು ಕೇಳಲು ಸಿಎಂ ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದಾರೆ. ಇನ್ನೊಂದು ಕಡೆ ಸಚಿವಾಕಾಂಕ್ಷಿಗಳು ತಮ್ಮ ಪರ ಬ್ಯಾಟಿಂಗ್ ಮಾಡುವಂತೆ ಲಾಬಿ ಮಾಡುತ್ತಿದ್ದಾರೆ.
ಬೆಂಗಳೂರು (ಸೆ. 18): ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು, ನೆರೆ, ಅತಿವೃಷ್ಟಿಯಿಂದಾದ ನಷ್ಟ ಪರಿಹಾರವನ್ನು ಕೇಳಲು ಸಿಎಂ ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದಾರೆ. ಇನ್ನೊಂದು ಕಡೆ ಸಚಿವಾಕಾಂಕ್ಷಿಗಳು ತಮ್ಮ ಪರ ಬ್ಯಾಟಿಂಗ್ ಮಾಡುವಂತೆ ಲಾಬಿ ಮಾಡುತ್ತಿದ್ದಾರೆ.
ಇಬ್ಬರಿಗೆ ಮಂತ್ರಿಗಿರಿ ಪಕ್ಕಾ, ಬಿಎಸ್‌ವೈ ಸರ್ಕಾರದ ರೂವಾರಿಗೆ ಕೈತಪ್ಪಿದ ಸಚಿವ ಸ್ಥಾನ?
ಇದರ ಮಧ್ಯೆ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆಯೊಂದನ್ನು ನೀಡಿದ್ದಾರೆ. 'ಸಚಿವ ಸಂಪುಟ ವಿಸ್ತರಣೆ ಬಿಎಸ್‌ವೈ ಅವರ ಪರಮಾಧಿಕಾರ. ಈ ಬಾರಿ ಅವಕಾಶ ಕೊಟ್ಟರೆ ಸಚಿವನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ' ಎಂದು ಹೇಳಿದ್ದಾರೆ.
ಈಗಾಗಲೇ ಯಡಿಯೂರಪ್ಪ ಭೇಟಿ ಬೆನ್ನಲ್ಲೇ ಕೆಲ ಸಚಿವಾಕಾಂಕ್ಷಿಗಳು ಪ್ರತ್ಯೇಕವಾಗಿ ದೆಹಲಿಗೆ ದೌಡಾಯಿಸಿದ್ದಾರೆ. ಶಾಸಕರಾದ ಎಚ್ ವಿಶ್ವನಾಥ್, ಸಿಪಿ ಯೋಗೇಶ್ವರ್, ಎಂಪಿ ರೇಣುಕಾಚಾರ್ಯ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.