Asianet Suvarna News Asianet Suvarna News

ಅವ್ರು ಅವರ ಗಡಿ ಕಾಯಲಿ, ನಮ್ಮ ಜಾಗಕ್ಕೆ ಕಣ್ಣು ಹಾಕೋದು ಬೇಡ: ಮರಾಠಿಗರಿಗೆ ರೂಪಾಲಿ ನಾಯ್ಕ್ ಕಿಡಿ

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ 'ಕಾರವಾರ, ಬೆಳಗಾವಿ ನಮ್ದು' ಎಂದು ಹೇಳಿಕೆ ಕೊಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಜಿತ್ ಪವಾರ್ ಹೇಳಿಕೆಯನ್ನು ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ನ. 18): ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ 'ಕಾರವಾರ, ಬೆಳಗಾವಿ ನಮ್ದು' ಎಂದು ಹೇಳಿಕೆ ಕೊಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಜಿತ್ ಪವಾರ್ ಹೇಳಿಕೆಯನ್ನು ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಲವಂತದಿಂದ ಬಂದ್ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಎಚ್ಚರಿಕೆ

'ನಾನು ಕೂಡಾ ಮರಾಠಿಯವಳು. ಕರ್ನಾಟಕದಲ್ಲಿ ಹುಟ್ಟಿ, ಇಲ್ಲಿನ ಅನ್ನ, ನೀರು ಕುಡಿದು ನಾವು ಅವರಿಗೆ ಬೆಂಬಲ ನೀಡುವುದಿಲ್ಲ.  ಮಹಾರಾಷ್ಟ್ರಕ್ಕೆ ನಮ್ಮ ಸಿಎಂ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ. ಅವರು ಅವರ ಗಡಿ ಕಾಯಲಿ. ನಮ್ಮ ಜಾಗಕ್ಕೆ ಕಣ್ಣು ಹಾಕೋದು ಬೇಡ. ಈ ಪ್ರಯತ್ನ ಯಾವತ್ತೂ ಯಶಸ್ವಿಯಾಗುವುದಿಲ್ಲ' ಎಂದು ಹೇಳಿದರು. 

 

Video Top Stories