Asianet Suvarna News Asianet Suvarna News

'ಮೀಸಲು ಇಲ್ಲ,  ಮಂಡಳಿಯೂ ಇಲ್ಲ, ಮಂತ್ರಿಗಿರಿಯೂ ಇಲ್ಲ'  ಮಹಾಮೋಸ!

* ಬಿಜೆಪಿಯಿಂದ  ಮರಾಠಿ ಸಮುದಾಯಕ್ಕೆ ಮೋಸ'
* ಮೀಸಲಾತಿ ಕೊಡಲಿಲ್ಲ, ನಿಗಮ ಮಂಡಳಿ ಮಾಡಲಿಲ್ಲ. ಇರೋ ಒಬ್ಬ ಸಚಿವ ಸ್ಥಾನವನ್ನು ಕಿತ್ತುಕೊಂಡ್ರಿ!'
*   ಬಿಜೆಪಿ ಸರ್ಕಾರದ ವಿರುದ್ಧ ಮರಾಠ ಸಮುದಾಯದ ಆರೋಪ
*  ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಎಚ್ಚರಿಕೆ

ಬಳ್ಳಾರಿ (ಆ. 12)  ಮೀಸಲಾತಿ ಕೊಡಲಿಲ್ಲ, ನಿಗಮ ಮಂಡಳಿ ಮಾಡಲಿಲ್ಲ. ಇರೋ ಒಬ್ಬ ಸಚಿವ ಸ್ಥಾನವನ್ನು ಕಿತ್ತುಕೊಂಡ್ರಿ! ಬಿಜೆಪಿ ಸರ್ಕಾರ ಬರಲು ಶಾಸಕ ಶ್ರೀಮಂತ ಪಾಟೀಲ್ ಕೂಡ ಪ್ರಮುಖ ಕಾರಣ ಈ ಸಾರಿ ಅವರಿಗೆ ಅನ್ಯಾಯ ಮಾಡಲಾಗಿದೆ ಎಂದು ಮರಾಠ ಸಮುದಾಯದವರು ಆರೋಪಿಸಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರ ಸ್ಥಾಪನೆಗೆ ರಮೇಶ್ ಜಾರಕಿಹೊಳಿ, ಆನಂದ ಸಿಂಗ್ ಹೇಗೆ ಕಾರಣವೋ ಹಾಗೆ  ಶ್ರೀಮಂತ ಪಾಟೀಲ್ ಕೂಡಾ ಕಾರಣ. ಶ್ರೀಮಂತ ಪಾಟೀಲರಿಗೆ ಅನ್ಯಾಯ ಮಾಡೋ ಮೂಲಕ ಬಿಜೆಪಿ ತನ್ನ ಸಾಂಪ್ರದಾಯಿಕ ಮತಕ್ಕೆ ಧಕ್ಕೆ ತಂದಿದೆ. ಸಾಂಪ್ರದಾಯಿಕ ಮತದಾರರಾದ ಮರಾಠಿ ಜನಾಂಗದ ಜನರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.

'ವಾರ ತಡ್ಕೊಳ್ಳಿ.. ಕಾವೇರಿಯ ಸ್ಫೋಟಕ ದೃಶ್ಯ ನನ್ನ ಬಳಿ ಇದೆ'

ಸರ್ಕಾರ ಬಂದ ನಂತರ ಮೀಸಲಾತಿ ಕೊಡ್ತೇನೆ ಎಂದು ಯಡಿಯೂರಪ್ಪ ಮೋಸ ಮಾಡಿದ್ದಾರೆ. ಬಸವಕಲ್ಯಾಣ ಉಪಚುನಾವಣೆ ವೇಳೆ ನಿಗಮ ಮಂಡಳಿ ಮಾಡೋದಾಗಿ ಹೇಳಿ ಕೈಕೊಟ್ಟಿದ್ದರು. ಸಚಿವ ಸ್ಥಾನ ಕೊಡದೇ ಇದ್ರೇ ರಾಜ್ಯದಲ್ಲಿ ನಲವತ್ತು ಲಕ್ಷ ಮತದಾರರನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಮರಾಠ ಸಮುದಾಯ ಎಚ್ಚರಿಕೆ ನೀಡಿದೆ.