Party rounds: ಖರ್ಗೆ ಕುಟುಂಬದಿಂದ ಪ್ರಧಾನಿ ಟೀಕೆ: ಮೋದಿ ವಿಷಸರ್ಪ- ಮೋದಿ ನಾಲಾಯಕ್!

 ಪ್ರಧಾನಮಂತ್ರಿ ನರೇಂದ್ರ ಮೋದಿ ನಾಲಾಯಕ್‌ ಎಂದು ಹೇಳುವ ಮೂಲಕ  ಪ್ರಿಯಾಂಕ ಖರ್ಗೆ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. 

First Published May 1, 2023, 8:54 PM IST | Last Updated May 1, 2023, 8:54 PM IST

ಬೆಂಗಳೂರು (ಮೇ 1): ದೇಶದಲ್ಲಿ ಮೋದಿ ಸಮುದಾಯ ಚೋರ್‌ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ಸಂಸತ್‌ ಸದಸ್ಯತ್ವ ಸ್ಥಾನವೇ ರದ್ದಾಗಿದೆ. ಆದ್ದರಿಂದ  ನರೇಂದ್ರ ಮೋದಿಯ ಬಗ್ಗೆ ವೈಯಕ್ತಿಕವಾಗಿ ವಾಗ್ದಾಳಿ ಮಾಡಬಾರದು ಎಂದು ಕಾಂಗ್ರೆಸ್‌ನ ಆಂತರಿಕ ಸಮಿತಿ ಸೂಚನೆ ನೀಡಿತ್ತು. ಆದರೆ, ಈಗ ಕಾಂಗ್ರಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿಗೆ ವಿಷ ಸರ್ಪ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಮೂಲಕ ಕಾಂಗ್ರೆಸ್‌ ಸಮಿತಿ ಹೇಳಿದ ಮಾತನ್ನೇ ಮುರಿಯುವುದರ ಜೊತೆಗೆ, ದೇಶದಲ್ಲಿ ಭಾರಿ ವಿವಾದವನ್ನು ಸೃಷ್ಟಿಸುವಂತೆ ಮಾಡಿದೆ. ಆದರೆ, ಈಗ ಮತ್ತೊಮ್ಮೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರು ಮೋದಿ ನಾಲಾಯಕ್‌ ಎಂದು ಹೇಳಿದ್ದಾರೆ. ಈಗ ಎರಡೂ ಮಾತುಗಳಿಂದ ಭಾರಿ ವಿವಾದ ಸೃಷ್ಟಿ ಮಾಡಿದ್ದಾರೆ. 

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ಗಾಂಧಿ ಕಟುಂಬಕ್ಕೆ ಮಾತ್ರ ಪ್ರಧಾನಮಂತ್ರಿ ಹುದ್ದೆ ಇರಬೇಕು ಎನ್ನುವ ಮನಸ್ಥಿತಿ ಇರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್‌ ಖರ್ಗೆ ಪ್ರಧಾನಮಂತ್ರಿ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನು ವಿಧಾನ ಪರಿಷತ್‌ ಸದಸ್ಯ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್‌ನವರು ಮೋದಿ ಹಾಗೂ ಬಿಜೆಪಿ ನಾಯಕರನ್ನು ತೆಗೆಳಿದಷ್ಟೂ ಹೆಚ್ಚಾಗಿ ಕಮಲ ಅರಳುತ್ತದೆ. ನಮ್ಮ ಮೇಲೆ ದಿನವೂ ಕೆಸರನ್ನು ಹಾಕಿದರೂ ಕೂಡ ಕಮಲ ಅರಳುತ್ತದೆ ಎಂದು ಹೇಳಿದರು. 

Video Top Stories