ಅಭಿವೃದ್ದಿ ಕೆಲಸಗಳಿಗಾಗಿ ಜನ ನನ್ನ ಕೈ ಹಿಡಿಯುತ್ತಾರೆ: ಹೆಚ್‌.ಸಿ. ಮಹದೇವಪ್ಪ

ಟಿ.ನರಸೀಪುರದಲ್ಲಿ ಹೆಚ್‌.ಸಿ. ಮಹದೇವಪ್ಪ ಪ್ರಚಾರ
ವೀರಪ್ಪನ ಒಡೆಯರ ಹುಂಡಿಯಲ್ಲಿ ಕ್ಯಾಂಪೇನ್‌
ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರಚಾರ ಆರಂಭ

First Published Apr 23, 2023, 6:10 PM IST | Last Updated Apr 23, 2023, 6:10 PM IST

ಮೈಸೂರು: ಹೆಚ್‌.ಸಿ. ಮಹದೇವಪ್ಪ ಟಿ.ನರಸೀಪುರದಲ್ಲಿ ಪ್ರಚಾರ ನಡೆಸಿದ್ದಾರೆ. ವೀರಪ್ಪನ ಒಡೆಯರ ಹುಂಡಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರಚಾರವನ್ನು ಮಹದೇವಪ್ಪ ಆರಂಭಿಸಿದ್ರು. ಅವರು ಟಿ.ನರಸೀಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಜನರಿಂದ ಸಹ ಅವರಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ವೇಳೆ ಮಾತನಾಡಿದ ಅವರು, ಸಮಸಮಾಜ ನಿರ್ಮಾಣವೇ ನಮ್ಮ ಉದ್ದೇಶವಾಗಿದೆ. ಅಭಿವೃದ್ಧಿ ಕೆಲಸಗಳಿಗಾಗಿ ಜನ ನನ್ನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ. ಜಾತಿ ಮತ್ತು ಧರ್ಮ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ಧಿಗೆ ಮಾರಕವಾದ ಅಂಶಗಳಾಗಿವೆ. ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲಿ ಯಾರೂ ಸ್ಪರ್ಧಿಗಳಿಲ್ಲ ಎಂದು ಮಹದೇವಪ್ಪ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ತೆರೆದ ವಾಹನದಲ್ಲಿ ಕೌರವ ಪ್ರಚಾರ: ಅಭಿವೃದ್ಧಿ ಕಾರ್ಯ ಪ್ರಸ್ತಾಪಿಸಿ ಮತಶಿಕಾರಿ

Video Top Stories