ಅಪ್ಪನ ಹಾದಿಯಲ್ಲೇ ನಡೆದ ಅಪ್ಪು.. ಶಿವಣ್ಣನ ದಾರಿಯೇ ಬೇರೆ..! ಇದು ದೊಡ್ಮನೆ 'ರಾಜ'ಕಾರಣದ ಇಂಟ್ರೆಸ್ಟಿಂಗ್ ಸ್ಟೋರಿ..!
ಇಂದಿರಾ ವಿರುದ್ಧ ಸ್ಪರ್ಧಿಸಿ ಎಂದಾಗ ಅಜ್ಞಾತರಾಗಿದ್ದರು ರಾಜಣ್ಣ..!
ಪುನೀತ್‌ಗೂ ಬಂದಿತ್ತು ಮೋದಿ ಆಹ್ವಾನ..No ಅಂದಿದ್ದರು ಅಪ್ಪು..!
ಅಪ್ಪನ ಹಾದಿಯಲ್ಲೇ ನಡೆದ ಅಪ್ಪು..ಶಿವಣ್ಣನ ದಾರಿಯೇ ಬೇರೆ..!
ಡಾ.ರಾಜ್ ಕುಮಾರ್ ಅವರ ಕುಟುಂಬ ಕರ್ನಾಟಕದ ದೊಡ್ಮನೆ ಅಂತಾನೇ ಫೇಮಸ್. ಆ ದೊಡ್ಮನೆಯಲ್ಲಿ ಅಣ್ಣಾವ್ರದ್ದು ಒಂದು ತೂಕವಾದ್ರೆ, ಅಣ್ಣಾವ್ರ ಮಕ್ಕಳದ್ದು ಮತ್ತೊಂದು ತೂಕ. ಅವ್ರೆಲ್ಲಾ ದೊಡ್ಮನೆ ಅನ್ನೋ ಹೆಸರಿಗೆ ಎಲ್ಲೂ ಅಪಚಾರವಾಗದಂತೆ ನಡೆದುಕೊಂಡವ್ರು. ಅವ್ರು ಅಭಿಮಾನಿಗಳನ್ನೇ(Fans) ದೇವ್ರು ಅಂತ ಕರೆದವರು. ಅದ್ಕೇ ಜನ ದೊಡ್ಮನೆಯನ್ನು, ದೊಡ್ಮನೆಯವ್ರನ್ನು ತಲೆಯ ಮೇಲೆ ಹೊತ್ತು ಮೆರೆಸಿದ್ದು, ಈಗ್ಲೂ ಮೆರೆಸ್ತಾ ಇರೋದು. ದೊಡ್ಮನೆಯವರ ಮೇಲೆ ಜನ ಇಟ್ಟಿರೋ ಪ್ರೀತಿ, ಅಭಿಮಾನ, ಆ ಫ್ಯಾನ್ ಫಾಲೋಯಿಂಗ್. ನಿಜಕ್ಕೂ ಅದ್ಭುತ. ಇಷ್ಟೊಂದು ಜನಪ್ರಿಯತೆ ಇದ್ಮೇಲೆ ದೊಡ್ಮನೆಯ ಮೇಲೆ ರಾಜಕಾರಣಿಗಳ ಕಣ್ಣು ಬೀಳದೇ ಇರುತ್ತಾ..? ಡಾ.ರಾಜ್ ಕುಟುಂಬದವರನ್ನು(Dr.Rajkumar) ರಾಜಕಾರಣಕ್ಕೆ ಕರೆ ತರುವ ಪ್ರಯತ್ನ ಅವತ್ತಿಂದ ಇವತ್ತಿನವರೆಗೆ ನಡೀತಾನೇ ಇದೆ. ಭಾನುವಾರ ಬೆಂಗಳೂರಿನಲ್ಲಿ ನಡೆದ ಆರ್ಯ-ಈಡಿಗ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar), ಅಣ್ಣಾವ್ರ ಹಿರಿಮಗ ಶಿವರಾಜ್ ಕುಮಾರ್ ಅವರಿಗೆ ಕಾಂಗ್ರೆಸ್(Congress) ಸೇರುವಂತೆ ಓಪನ್ ಆಫರ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಲೋಕಸಭಾ(Lok Sabha ) ಚುನಾವಣೆಯಲ್ಲಿ ನೀವು ಎಲ್ಲಿ ನಿಲ್ತೀರೋ, ಅಲ್ಲಿಂದ ಟಿಕೆಟ್ ಕೊಡೋದಾಗಿ ತುಂಬಿದ ಸಭೆಯಲ್ಲೇ ಘೋಷಿಸಿ ಬಿಟ್ಟಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವ್ರ ಈ ಆಫರ್'ಗೆ ಅದೇ ವೇದಿಕೆಯಲ್ಲಿ ಉತ್ತರ ಕೊಟ್ಟ ಶಿವಣ್ಣ(Sivaraj kumar), ನಾನು ರಾಜಕೀಯಕ್ಕೆ ಬರೋದೂ ಇಲ್ಲ, ಅದು ಬೇಕಾಗಿಯೂ ಇಲ್ಲ. ಬಣ್ಣ ಹಚ್ಚೋದಷ್ಟೇ ನಮ್ಮ ಕೆಲಸ ಅಂದು ಬಿಟ್ರು. ಕಾಂಗ್ರೆಸ್ ಸೇರಿ ಅನ್ನೋ ಡಿಕೆ ಶಿವಕುಮಾರ್ ಅವರ ಆಫರನ್ನು ಈ ರೀತಿ ನಯವಾಗಿ ತಿರಸ್ಕರಿಸಿ ಬಿಟ್ರು ಹ್ಯಾಟ್ರಿಕ್ ಹೀರೋ ಶಿವಣ್ಣ. ಈ ಘಟನೆಯ ನಂತ್ರ ದೊಡ್ಮನೆ ಮತ್ತು ರಾಜಕಾರಣದ ಬಗ್ಗೆ ದೊಡ್ಡ ಚರ್ಚೆಯಾಗ್ತಿದೆ. ಪುನೀತ್ ರಾಜ್‌ಕುಮಾರ್. ಡಾ.ರಾಜ್ ಕುಮಾರ್ ಅವ್ರಿಗೆ ರಾಜಕೀಯ ಇಷ್ಟ ಇರ್ಲಿಲ್ಲ. ರಾಜಕಾರಣದ ಸಹವಾಸವೇ ಬೇಡ ಅಂದಿದ್ದವರು ಅಣ್ಣಾವ್ರು. ಅಪ್ಪು, ಅಪ್ಪನ ಹಾದಿಯಲ್ಲೇ ನಡೆದಿದ್ದ ತಂದೆಗೆ ತಕ್ಕ ಮಗ. 2021ರಲ್ಲಿ ಯುವರತ್ನ ಸಿನಿಮಾ ಬಿಡುಗಡೆಯ ವೇಳೆ ಸಿಕ್ಕ ಪುನೀತ್ ಅವ್ರನ್ನು ರಾಜಕೀಯಕ್ಕೆ ಬರ್ತೀರಾ ಅಂತ ಮಾಧ್ಯಮದವರು ಪ್ರಶ್ನಿಸಿದಾಗ, ಜನರೇ ಕೊಟ್ಟ ಪವರ್ ನಮ್ಮ ಬಳಿ ಇರೋವಾಗ, ಈ ರಾಜಕೀಯ ಯಾಕ್ರೀ ಬೇಕು ಅಂತ ಪ್ರಶ್ನಿಸಿದ್ದರು ಪವರ್'ಸ್ಟಾರ್ ಪುನೀತ್.
ಇದನ್ನೂ ವೀಕ್ಷಿಸಿ: ಸೇಡಿಗಾಗಿ ಕಾಯುತ್ತಿದ್ದವರಿಗೆ ಸುಪಾರಿ ಕೊಟ್ಟಿದ್ದ ಅಣ್ಣ!30 ವರ್ಷದ ಸೇಡು..10 ಎಕರೆ ಭೂಮಿ ಕೊಲೆಗೆ ಕಾರಣನಾ ?