ಸಿಎಂ-ಡಿಸಿಎಂ ಅಷ್ಟೇ ಅಲ್ಲ, 27 ಸಂಭಾವ್ಯ ಸಚಿವರ ಪಟ್ಟಿ ಫೈನಲ್!

ಸಿಎಂ-ಡಿಸಿಎಂ ಅಷ್ಟೇ ಅಲ್ಲ, 27 ಸಂಭಾವ್ಯ ಸಚಿವರ ಪಟ್ಟಿ ಕೂಡ ಫೈನಲ್ ಆಗಿದೆ. ಹೌದು, ಯಾವ ಜಿಲ್ಲೆಯಿಂದ ಯಾವ ಶಾಸಕರಿಗೆ ಮಂತ್ರಿಗಿರಿ ಸಿಗಲಿದೆ?. ಹೊಸ ಸಂಪುಟದಲ್ಲಿ ಯಾರಿಗೆ ಮಂತ್ರಿಗಿರಿ ಭಾಗ್ಯ ಒಲಿಯಲಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಳಿ ಇದೆ ಸಂಭಾವ್ಯ ಸಚಿವ ಲಿಸ್ಟ್‌

First Published May 18, 2023, 1:32 PM IST | Last Updated May 18, 2023, 1:32 PM IST

ಬೆಂಗಳೂರು(ಮೇ.18):  ಸಿಎಂ-ಡಿಸಿಎಂ ಅಷ್ಟೇ ಅಲ್ಲ, 27 ಸಂಭಾವ್ಯ ಸಚಿವರ ಪಟ್ಟಿ ಕೂಡ ಫೈನಲ್ ಆಗಿದೆ. ಹೌದು, ಯಾವ ಜಿಲ್ಲೆಯಿಂದ ಯಾವ ಶಾಸಕರಿಗೆ ಮಂತ್ರಿಗಿರಿ ಸಿಗಲಿದೆ?. ಹೊಸ ಸಂಪುಟದಲ್ಲಿ ಯಾರಿಗೆ ಮಂತ್ರಿಗಿರಿ ಭಾಗ್ಯ ಒಲಿಯಲಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಳಿ ಇದೆ ಸಂಭಾವ್ಯ ಸಚಿವ ಲಿಸ್ಟ್‌. ಸಿಎಂ ಆಯ್ಕೆ ಪ್ರಕ್ರಿಯೆ ಬಹಳ ಕಗ್ಗಂಟಾಗಿತ್ತು. ಈಗ ಇದು ತಿಳಿಯಾಗಿದೆ. ಅದ್ರೆ, ಇದೀಗ ಸಚಿವಗಿರಿ ಸರ್ಕಸ್‌ ಆರಂಭವಾಗಿದೆ. ಬೆಳಗಾವಿಯಿಂದ ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳಕರ್‌, ಸತೀಶ್‌ ಜಾರಕಿಹೊಳಿ, ಬಾಗಲಕೋಟೆಯಿಂದ ಆರ್‌.ಬಿ. ತಿಮ್ಮಾಪುರ, ವಿಜಯಪುರದಿಂದ ಎಂ.ಬಿ.ಪಾಟೀಲ್‌, ಶಿವಾನಂದ ಪಾಟೀಲ್‌, ಯಶವಂತ ರಾಯಗೌಡ ಪಾಟೀಲ್‌, ಕಲಬುರಗಿಯಿಂದ ಪ್ರಿಯಾಂಕ್‌ ಖರ್ಗೆ, ಡಾ. ಅಜಯ್‌ ಸಿಂಗ್‌, ಶರಣ ಪ್ರಕಾಶ್‌ ಪಾಟೀಲ್‌, ರಾಯಚೂರಿನಿಂದ ಬಸನಗೌಡ ತರವಿಹಾಳ, ಯಾದಗಿರಿಯಿಂದ ಶರಣಪ್ಪ ದರ್ಶನಾಪೂರ್‌, ಬೀದರ್‌ನಿಂದ ರಹೀಮ್‌ ಖಾನ್‌, ಈಶ್ವರ್‌ ಖಂಡ್ರೆ, ಕೊಪ್ಪಳದಿಂದ ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್‌, ಗದಗನಿಂದ ಎಚ್‌.ಕೆ.ಪಾಟೀಲ್‌ ಅವರುಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. 

ಸಿದ್ದರಾಮಯ್ಯ ಕರ್ನಾಟಕದ ನೂತನ ಮುಖ್ಯಮಂತ್ರಿ: ಸಿಎಂ ಆಯ್ಕೆ ಬಿಕ್ಕಟ್ಟು ಶಮನವಾಗಿದ್ದು ಹೇಗೆ?

Video Top Stories