ಹೆಬ್ಬಾಳ್ಕರ್‌ಗೆ ಸವಾಲ್ ಹಾಕಿದವರ ನಿದ್ದೆಗೆಡಿಸಲು ಸವದಿ ಅಸ್ತ್ರ..“ಕುಂದಾ” ರಣರಂಗದಲ್ಲಿ ಶುರುವಾಯ್ತಾ ಡಿಕೆಶಿ ಪಗಡೆಯಾಟ..?
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಕುಂದಾನಗರಿ ಅಖಾಡದ ಹೊಸ ಮುಖಾಮುಖಿ. ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ ಸವದಿ ತೊಡೆ ತಟ್ಟಿ ನಿಂತಿದ್ದಾರೆ.
ಕುಂದಾನಗರಿಯ ರಣರಂಗದಲ್ಲಿ ಡಿಕೆಶಿ ಚದುರಂಗ ಆಡುತ್ತಿದ್ದು, ಅತ್ಯಾಪ್ತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸವಾಲ್ ಹಾಕಿದವರ ನಿದ್ದೆಗೆಡಿಸಲು, ಕನಕಪುರ ಬಂಡೆ ಶುರು ಮಾಡಿದ್ದಾರೆ. ಆ ಪಗಡೆಯಾಟದಲ್ಲಿ, ಚಂದುರಂಗದಲ್ಲಿ ಡಿಕೆ ಶಿವಕುಮಾರ್ ಉರುಳಿಸಿರೋ ದಾಳದ ಹೆಸರು ಲಕ್ಷ್ಣಣ ಸಂಗಪ್ಪ ಸವದಿ .ರಣರಣ ಬೆಳಗಾವಿ ರಾಜಕಾರಣದ ದೊಡ್ಡ ಹೆಸರು, ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೇಸರಿ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ. ಅಥಣಿಯಿಂದ ಬಿಜೆಪಿ ಟಿಕೆಟ್ ಕೈ ತಪ್ಪಿ ಸಿಡಿದೆದ್ದಿರುವ ಸವದಿ, ಬಿಜೆಪಿಗೆ ಶಾಕ್ ಕೊಟ್ಟು ಕೈ ಬಾವುಟ ಹಿಡಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಅಥಣಿ ಅಖಾಡಕ್ಕಿಳಿಯಲು ರೆಡಿಯಾಗಿದ್ದಾರೆ. ರಾಜಕಾರಣದಲ್ಲಿ ಅತೀ ದೊಡ್ಡ ಆಪರೇಷನ್. ಕುಂದಾನಗರಿಯ ಪ್ರಮುಖ ಕೇಸರಿ ಕಲಿಯನ್ನು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.