Asianet Suvarna News Asianet Suvarna News

ಬಂಗಾರಪ್ಪ ಪುತ್ರರಿಂದ ಸಿದ್ದು ಭೇಟಿ: ಅಣ್ತಮ್ಮಾಸ್‌ ಒಂದು ಮಾಡಲು ತೆರೆ ಮರೆಯಲ್ಲಿ ಪ್ಲ್ಯಾನ್

Oct 16, 2021, 3:36 PM IST

ಬೆಂಗಳೂರು (ಅ. 16):  ರಾಜಕೀಯ ವೈರಿಗಳಂತಿದ್ದ ಮಧು ಬಂಗಾರಪ್ಪ (Madhu Bangarappa) ಹಾಗೂ ಕುಮಾರ್ ಬಂಗಾರಪ್ಪ (Kumar Bangarappa) ಸಹೋದರರು ಒಟ್ಟಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮನೆಗೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಅವರ ಹಾದಿಯಲ್ಲೇ ಕುಮಾರ ಬಂಗಾರಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಗುಸು ಗುಸುಗೆ ಇದು ಕಾರಣವಾಯಿತು. 

ಮಾಜಿ ಪ್ರಧಾನಿ ಸಿಂಗ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ ಭಾರತ!

ಆದರೆ, ಕಾಂಗ್ರೆಸ್‌ ಮೂಲಗಳು ಇದನ್ನು ನಿರಾಕರಿಸಿದ್ದು ಕುಮಾರ ಬಂಗಾರಪ್ಪ ಅವರು ತಮ್ಮ ಪುತ್ರಿಯ ಮದುವೆಗೆ ಆಮಂತ್ರಣ ನೀಡಲು ಆಗಮಿಸಿದ್ದರು. ಇದಕ್ಕೂ ಮೊದಲೇ ಹಾನಗಲ್‌ ಕ್ಷೇತ್ರದ ವರದಿ ನೀಡಲು ಮಧು ಬಂಗಾರಪ್ಪ ಆಗಮಿಸಿದ್ದರು. ಹೀಗಾಗಿ ಆಕಸ್ಮಿಕವಾಗಿ ಮುಖಾಮುಖಿಯಾಗಿದ್ದಾರೆ ಎಂದಿದ್ದಾರೆ.