ಲೋಕಸಮರದಲ್ಲಿ ಬಿಜೆಪಿ..ಕಾಂಗ್ರೆಸ್‌ಗೆ ಭಿನ್ನರದ್ದೇ ತಲೆಬಿಸಿ..! ಎಲ್ಲೆಲ್ಲಿ ಬಂಡಾಯ..? ಹೇಗಿದೆ ಬಂಡೆದ್ದವರ ಚದುರಂಗದಾಟ..?
ಬಿಎಸ್‌ವೈ ಪುತ್ರನ ಗೆಲುವಿಗೆ ಅಡ್ಡಿಯಾಗುತ್ತಾ ಈಶ್ವರಪ್ಪ ಬಂಡಾಯ..?
ಬೆಂ.ಉತ್ತರದಲ್ಲಿ ಬಿಜೆಪಿಗೆ ಮುಳ್ಳಾಗುತ್ತಾ ಸದಾನಂದ ಗೌಡರ ಸಿಟ್ಟು..?
ತುಮಕೂರಿನಲ್ಲಿ ಸೋಮಣ್ಣ ವಿರುದ್ಧ ಮಾಧುಸ್ವಾಮಿ ರೆಬೆಲ್..!
ದಾವಣಗೆರೆಯಲ್ಲಿ ಬಂಡೆದ್ದು ದಂಡು ಕಟ್ಟಿದ ಹೊನ್ನಾಳಿ ಶೂರ..!
ಲೋಕಸಭಾ ಅಖಾಡದಲ್ಲಿ ಭುಗಿಲೆದ್ದು ನಿಂತಿರೋ ಬಂಡಾಯದ ಜ್ವಾಲೆಯ ಕಿಡಿಯಿದು. ಲೋಕಯುದ್ಧದ ರಣರಂಗದಲ್ಲಿ ಬಿಜೆಪಿಗೂ(BJP) ಬಂಡಾಯದ ಬಿಸಿ, ಕಾಂಗ್ರೆಸ್"ಗೂ(Congress) ಭಿನ್ನರ ಕಾಟ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಬಂಡಾಯದ ಬಿರುಗಾಳಿಯೇ ಎದ್ದು ಬಿಟ್ಟಿದೆ. ಲೋಕಸಭಾ ಚುನಾವಣೆಯೂ(Loksabha) ಘೋಷಣೆಯಾಗಿದೆ. 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರೂ ಪ್ರಕಟವಾಗಿದೆ. ಅತ್ತ ಕಡೆ ಕಾಂಗ್ರೆಸ್ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದು, ಉಳಿದ 21 ಅಖಾಡಗಳಲ್ಲಿ ಹುರಿಯಾಳು ಯಾರು ಅನ್ನೋದನ್ನು ಅಳೆದೂ ತೂಗಿ ಫೈನಲ್ ಮಾಡ್ತಾ ಇದೆ. ಎರಡೂ ಪಕ್ಷಗಳ ಪೂರ್ಣ ಪಟ್ಟಿ ಹೊರಬೀಳೋ ಮೊದ್ಲೇ ಇಬ್ಬರಿಗೂ ಬಂಡಾಯದ ಬಿಸಿ ತಟ್ಟಿದೆ. ಅದ್ರಲ್ಲೂ ಬಿಜೆಪಿಗೆ ತಟ್ಟಿರೋದು ಬರೀ ಬಿಸಿಯಲ್ಲ, ಅದು ಕೇಸರಿ ಕೋಟೆಯೊಳಗೆ ಎದ್ದಿರೋ ಬಂಡಾಯದ ಜ್ವಾಲಾಮುಖಿ. ಇದು ಶಿವಮೊಗ್ಗ(Shivamogga) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭೀಷ್ಮಾಚಾರ್ಯ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ನುಗ್ಗಿ ಬಂದಿರೋ ಪಾಶುಪತಾಸ್ತ್ರ. ಅದೇ ಈಶ್ವರಪ್ಪನವರು(KS Eshwarappa) ಶಿವಮೊಗ್ಗದಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಪುತ್ರನಿಗೆ ಹಾವೇರಿ ಟಿಕೆಟ್ ತಪ್ಪಿರೋದಕ್ಕೆ ನಿಗಿನಿಗಿ ಕೆಂಡದಂತಾಗಿರೋ ಈಶ್ವರಪ್ಪ, ಬಿಎಸ್ವೈ ವಿರುದ್ಧ ತಿರುಗಿ ಬಿದ್ದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲ, ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕಳೆದ ಮೂರು ದಿನಗಳಲ್ಲಿ ವಾಕ್ಪ್ರಹಾರ ನಡೆಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?