Political Express: ಕೆಆರ್ಪಿಪಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು..!
ಪಾಲಿಟಿಕಲ್ ಎಕ್ಸ್‌ಪ್ರೆಸ್‌ನಲ್ಲಿ ಕರ್ನಾಟಕ ಕುರುಕ್ಷೇತ್ರ ಕಾವೇರಿರುವ ಸಂದರ್ಭದಲ್ಲಿ 31 ಜಿಲ್ಲೆಗಳ 224 ಕ್ಷೇತ್ರಗಳ ಪಾಲಿಟಿಕಲ್ ಸುದ್ದಿಗಳನ್ನು ಸಂಪೂರ್ಣವಾಗಿ ತಿಳಿಸಲಾಗಿದೆ.
ಚುನಾವಣಾ ಆಯೋಗ ಕೆಆರ್ಪಿಪಿ ಪಕ್ಷಕ್ಕೆ ಫುಟ್ ಬಾಲ್ ಚಿಹ್ನೆಯನ್ನು ನೀಡಿದ್ದು, ಜನಾರ್ದನ ರೆಡ್ಡಿ ಚಿಹ್ನೆಯ ಜತೆ ಭರ್ಜರಿ ಪ್ರಚಾರ ನಡೆಸಿದ್ದಾರೆ. ಗಂಗಾವತಿ ನಗರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪಕ್ಷ ಕಾರ್ಯಕರ್ತರು ಭರ್ಜರಿಯಾಗಿ ಹೂಮಳೆ ಸುರಿಸಿ ಸ್ವಾಗತ ಮಾಡಿದ್ದರು. ಅಲ್ಲದೆ ಸಾಯಿ ನಗರದ ಮರಿಸ್ವಾಮಿ ಹಾಗೂ ರಾಜು ನಾಯ್ಕ ಎಂಬ ಯುವಕರು ಕೆಆರ್ಪಿಪಿ ಪಕ್ಷದ ಚಿಹ್ನೆಯನ್ನು ಹೆಸರನ್ನು ಹಚ್ಚೆ ಹಾಕಿಸಿಕೊಂಡು ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದ್ದಾರೆ.