ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಮತ ಹಾಕಿದಂತೆ, ಯೋಚಿಸಿ ವೋಟ್‌ ಹಾಕಿ: ಅಮಿತ್ ಶಾ

ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದಂತೆಯೇ  ಎಂದು ಅಮಿತ್ ಶಾ ಹೇಳಿದ್ದಾರೆ. 

First Published Apr 25, 2023, 2:47 PM IST | Last Updated Apr 25, 2023, 2:47 PM IST

ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದಂತೆಯೇ  ಎಂದು ಅಮಿತ್ ಶಾ ಹೇಳಿದ್ದಾರೆ. ಬಾಗಲಕೋಟೆಯ ತೇರದಾಳದಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಅವರು
 ಜೆಡಿಎಸ್ ಗೆ ಮತಹಾಕಿದಿರಿ ಎಂದಿಟ್ಟುಕೊಳ್ಳಿ.  ಯಾವ ಪಕ್ಷಕ್ಕೂ ಬಹುಮತ ಬಾರದೇ ಇದ್ದರೆ ಜೆಡಿಎಸ್ ನವರು ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿ ಸರ್ಕಾರ ರಚಿಸುತ್ತಾರೆ. ಹಾಗಾಗಿ, ಜೆಡಿಎಸ್ ಗೆ ಮತ ಹಾಕಿದರೆ ಅದು ಕಾಂಗ್ರೆಸ್ಸಿಗೆ ಹಾಕಿದಂತೆ ಎಂದು ಶಾ ಹೇಳಿದರು. ಹಾಗೇ ಕರ್ನಾಟಕದಲ್ಲಿ ರದ್ದುಗೊಳಿಸಲಾಗಿರುವ ಮುಸ್ಲಿಮರ ಮೀಸಲಾತಿಯನ್ನು ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದರೆ ವಾಪಸ್ಸು ತರುವುದಾಗಿ ಹೇಳಿದೆ. ಆದರೆ, ಈಗ ಮುಸ್ಲಿಮರ ಮೀಸಲಾತಿ ರದ್ದತಿಯಿಂದ ಹೆಚ್ಚಾಗಿರುವ ಅನ್ಯ ಸಮುದಾಯಗಳ ಮೀಸಲಾತಿಯಲ್ಲಿ ಯಾವುದನ್ನು ಕಡಿಮೆ ಮಾಡಿ ನೀವು ಮುಸ್ಲಿಮರಿಗೆ ಪುನಃ ಮೀಸಲಾತಿ ನೀಡುತ್ತೀರಿ  ಎಂದು ಕಾಂಗ್ರೆಸ್‌ನ್ನು ಪ್ರಶ್ನಿಸಿದರು.  ಡಬಲ್ ಇಂಜಿನ್ ಸರ್ಕಾರವಿದ್ದರೆ ಮಾತ್ರ ಉತ್ತಮ ಕಾರ್ಯ ಮಾಡಲು  ಸಾಧ್ಯ.  ಹಾಗಾಗಿ, ನೀವೆಲ್ಲರೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕೇಳಿಕೊಂಡರು 

Video Top Stories