ಸಿದ್ದರಾಮಯ್ಯ ಫುಲ್ ಟೈಮ್ ಸಿಎಂ, ಆಪ್ತರ ಸಂಪುಟಕ್ಕೆ ಸೇರಿಸಲು ರಹಸ್ಯ ಸಭೆ!

ಸಂಪುಟ ವಿಸ್ತರಣೆಗೆ ಬೆಂಬಲಿಗರ ಜೊತೆ ಸಿದ್ದರಾಮಯ್ಯ ರಹಸ್ಯ ಸಭೆ, ಸಿದ್ದರಾಮಯ್ಯ ಫುಲ್ ಟೈಮ್ ಸಿಎಂ ಎಂದು ಎಂಬಿ ಪಾಟೀಲ್,ಗೆದ್ದ ಶಾಸಕರಿಗೆ ಹಂಗಾಮಿ ಸ್ಪೀಕರ್ ಪ್ರಮಾಣವಚನ ಬೋಧನೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

First Published May 22, 2023, 11:19 PM IST | Last Updated May 22, 2023, 11:19 PM IST

ಸಂಪುಟಕ್ಕೆ ಆಪ್ತರನ್ನು ಸೇರಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವುಕುಮಾರ್ ನಡುವೆ ಜಟಾಪಟಿ ನಡೆದಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ತಮ್ಮ ತಮ್ಮ ಆಪ್ತರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪೈಪೋಟಿ ನಡೆಯುತ್ತಿದೆ. ಇತ್ತ ಸಿದ್ದರಾಮಯ್ಯ ಆಪ್ತರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಇದರ ನಡುವೆ ಎಂಬಿ ಪಾಟೀಲ್ ನೀಡಿದ ಹೇಳಿಕೆ ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯಗೆ ಅಧಿಕಾರ ಬಿಟ್ಟುಕೊಡಲು ಹೈಕಮಾಂಡ್ ಸೂಚಿಸಿಲ್ಲ. ಈ ರೀತಿಯ ಯಾವುದೇ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯ ಪೂರ್ಣಾವದಿ ಸಿಎಂ ಆಗಿರುತ್ತಾರೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. 
 

Video Top Stories