ರಾಮ, ಹನುಮಂತನ ಮೇಲೆ ಕಾಂಗ್ರೆಸಿಗರಿಗೆ ಯಾಕೆ ಇಷ್ಟು ಕೋಪ..?

ಕಾಂಗ್ರೆಸ್‌ ನವರಂಗಿ ಆಟವಾಡುತ್ತಿದ್ದು, ಸಿದ್ದರಾಮಯ್ಯ -ಡಿಕೆಶಿವಕುಮಾರ್‌ ನವರಂಗಿ ಆಟ ಬಿಡಬೇಕು  ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

First Published May 3, 2023, 3:44 PM IST | Last Updated May 3, 2023, 3:44 PM IST

 ಕಾಂಗ್ರೆಸ್‌ ನವರಂಗಿ ಆಟವಾಡುತ್ತಿದ್ದು, ಸಿದ್ದರಾಮಯ್ಯ -ಡಿಕೆಶಿವಕುಮಾರ್‌ ನವರಂಗಿ ಆಟ ಬಿಡಬೇಕು  ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರವಾಗಿ ಮಾಧ್ಯಮದ ಜತೆ ಅವರು ಮಾತನಾಡಿದ್ದು, ಸೀತೆ ಹುಡುಕಿ ಕೊಂಡು ಹೋದ ಭಜರಂಗಿ ರಾಮನಿಗಾಗಿ ಪರ್ವತವನ್ನೇ ಎತ್ತಿಕೊಂಡು ಬಂದ. ಕರ್ನಾಟಕದ ಭಜರಂಗಿಗಳು ಹಿಂದೂತ್ವಕ್ಕಾಗಿ, ಗೋ ಮಾತೆಗಾಗಿ ಅದೇ ಪರ್ವತದಡಿ ಕಾಂಗ್ರೆಸ್​ನನ್ನು ಹೊಸಕಿ ಹಾಕುತ್ತಾರೆ. ಎಚ್ಚರಿಕೆಯಿಂದ ಮಾತನಾಡಿ. ರಾಮ, ಹನುಮಂತನ ಮೇಲೆ ಕಾಂಗ್ರೆಸಿಗರಿಗೆ ಯಾಕೆ ಇಷ್ಟು ಕೋಪ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು. ಹಾಗೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಸಾಮಾ ಬಿನ್ ಲ್ಯಾಡೆನ್ ಮತ್ತು ಮುಲ್ಲಾ ಉಮಾರ್ ನೇತೃತ್ವದ ತಾಲಿಬಾನ್ ಸರಕಾರ ರಚನೆ ಆಗುತ್ತದೆ ಎಂದು ಹೇಳಿದರು. 

Video Top Stories