karnataka election:ಕೆಜೆಪಿ ಕಟ್ಟುವಾಗ ಯಡಿಯೂರಪ್ಪಗೆ ಏನಾಗಿತ್ತು ?- ಶೆಟ್ಟರ್ ತಿರುಗೇಟು
ಬಿಜೆಪಿಯಿಂದ ಟಿಕೆಟ್ ಕೊಡದೇ ನನಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ಕೊಟ್ಟಿದ್ದರು. ಹೈಕಮಾಡ್ ಸಲಹೆಗೆ ನಾನು ಒಪ್ಪಿಲ್ಲ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ.
ಹುಬ್ಬಳ್ಳಿ (ಏ.16): ಬಿಜೆಪಿಯಿಂದ ಟಿಕೆಟ್ ಕೊಡದೇ ನನಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ಕೊಟ್ಟಿದ್ದರು. ಹೈಕಮಾಡ್ ಸಲಹೆಗೆ ನಾನು ಒಪ್ಪಿಲ್ಲ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಬೆಂಗಳೂರಿನಲ್ಲಿಯೂ ಕೆಲವರ ಜೊತೆ ಮಾತನಾಡಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ನಾನು ಈಗ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಮುಂದಿನ ನಿರ್ಧಾರದ ಬಗ್ಗೆ ಬೆಂಗಳೂರಿಗೆ ಹೋಗಿ ಕೆಲವರೊಂದಿಗೆ ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳುತ್ತೇನೆ. ಇಲ್ಲಿ ಎಂ.ಎಲ್.ಎ. ಟಿಕೆಟ್ ವಿಚಾರ ಸಣ್ಣ ವಿಷಯವಾಗಿದ್ದು, ಅದೊಂದನ್ನೇ ನಾನು ಕೇಳುತ್ತಿದ್ದೇನೆ. ಅದಕ್ಕೂ ಹೈಕಮಾಂಡ್ ಸ್ಪಂದಿಸಿಲ್ಲ. ಹೀಗಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಇನ್ನು ಪಕ್ಷ ಬಿಡದಂತೆ ಮನವೊಲಿಸಿದ ಅವರು ನನಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ಕೊಟ್ಟಿದ್ದರು. ಆದರೆ ನಾನು ಹೈಕಮಾಡ್ ಸಲಹೆಗೆ ಒಪ್ಪಿಲ್ಲ ಎಂದು ಹೇಳಿದರು.