ಕರ್ನಾಟದ ಗೋಲ್ಡ್ ಮ್ಯಾನ್, ಹೀಗೊಬ್ಬ ಕೆಜಿಎಫ್‌ ಬಾಬು ಡೈಹಾರ್ಡ್‌ ಫ್ಯಾನ್!

ಕೈ ಬೆರಳು ತುಂಬ ಚಿನ್ನದ ಉಂಗರು, ಕತ್ತು ಕಾಣಿಸದಷ್ಟು ದೊಡ್ಡ ಗಾತ್ರದ ಚಿನ್ನದ ಸರ, ಬ್ರಾಸ್‌ಲೆಟ್, ಸೇರಿದಂತೆ ಎಲ್ಲಿ ನೋಡಿದರೂ ಚಿನ್ನ. ಈ ಗೋಲ್ಡ್ ಮ್ಯಾನ್ ಕೆಜಿಎಫ್ ಬಾಬು ಅಭಿಮಾನಿ. 

First Published Apr 13, 2023, 6:38 PM IST | Last Updated Apr 13, 2023, 6:38 PM IST

ಚಿಕ್ಕಪೇಟೆ ವಿಧಾನ‌ಸಭೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷೆಗಳು‌ ಇಂದು‌ ನಾಮಪತ್ರ ಸಲ್ಲಿಕೆ‌ಮಾಡಿದ್ದಾರೆ. ಮಾಜಿ ಮೇಯರ್ ಗಂಗಾಂಭಿಕೆ ಮಲ್ಲಿಕಾರ್ಜುನ್ ಹಾಗೂ ಕೆಜಿಎಫ್ ಬಾಬು ಪತ್ನಿ ಶಾಜಿಯ ತರುನುಂ ನಾಮಪತ್ರ ಸಲ್ಲಿಕೆ ವೇಳೆ ಗೋಲ್ಡ್ ಮ್ಯಾನ್ ಅಭಿಮಾನಿಯೊಬ್ಬ ಎಲ್ಲರ ಗಮನಸೆಳೆದಿದ್ದರು. ಕೆಜಿಎಫ್ ಪ್ರಶಾಂತ್ ಹೆಸರಿನ ಈ ವ್ಯಕ್ತಿ ಮೈ ತುಂಬಾ ಚಿನ್ನದ ಹಾರಗಳನ್ನು ಹಾಕಿಕೊಂಡು ಬಂದಿದ್ದು, ಆತನ ಕೈಯಲ್ಲಿದ್ದ ಉಂಗರುಗಳು ಎಲ್ಲರ ಈತನ ಅಭಿಮಾನವನ್ನು ಹೇಳುತ್ತಿತ್ತು. ಕಾರಣ ಆ ಚಿನ್ನದ ಉಂಗುರಗಳ ಮೇಲೆ ಇದ್ದ ಕೆಜಿಎಫ್ ಬಾಬು ಅವರ ಚಿತ್ರ.. ಈ ಗೋಲ್ಡ್ ಮ್ಯಾನ್ ಕೆಜಿಎಫ್ ಬಾಬು ಅಭಿಮಾನಿ.  ನಾಯಕರ ಮೇಲೆ ಬಹಳ ಪ್ರೀತಿ ಇದೆ ಜೊತೆಗೆ ನಾನು ಆಭರಣ ಪ್ರಿಯನಾಗಿದ್ದು, ಕೆಜಿಎಫ್ ಬಾಬು ಮೇಲಿನ ಪ್ರೀತಿಯನ್ನು ಈ ಮೂಲಕ ವ್ಯಕ್ತ ಪಡಿಸುತ್ತಿರೋದಾಗಿ ತಿಳಿಸಿದ್ದಾನೆ..
 

Video Top Stories