Party Rounds ಶೆಟ್ಟರ್ ನಿರ್ಗಮದ ಬಳಿಕ ಜೆಪಿ ನಡ್ಡಾ ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ!
ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸತತ ಮೀಟಿಂಗ್ ನಡೆಸುತ್ತಿದ್ದಾರೆ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ನಿರ್ಗಮನದ ಬಳಿಕ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಆಗಬಹುದಾದ ಅಪಾಯಗಳು ಹಾಗೂ ಅವುಗಳನ್ನು ಎದುರಿಸುಲು ಬಿಜೆಪಿ ಕೈಗೊಂಡಿರುವ ಕ್ರಮಗಳ ಕುರಿತು ಜೆಪಿ ನಡ್ಡಾ ವಿವರಣೆ ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿ(ಏ.19): ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಬಿಜೆಪಿ ತೊರೆದ ಬಳಿಕ ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸತತ ಸಭೆ ನಡೆಸಿದ್ದಾರೆ. ನಾಯಕ ನಿರ್ಗಮನದ ಬಳಿಕ ಲಿಂಗಾಯಿತ ಸಮುದಾಯದ ಮೇಲೆ ಆಗಿರುವ ಪರಿಣಾಮ, ಡ್ಯಾಮೇಜ್ ಕಂಟ್ರೋಲ್‌ಗೆ ಏನೂ ಮಾಡಬೇಕ ಅನ್ನೋದರ ಕುರಿತು ಚರ್ಟೆ ನಡೆಸಿದ್ದಾರೆ. ಈ ಸಭೆಯಲ್ಲಿ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ. ಇದೀಗ ಹುಬ್ಭಳ್ಳಿ ಹಾಗೂ ಲಿಂಗಾಯಿತ ಸಮುದಾಯಕ್ಕೆ ಬಿಜೆಪಿ ನೀಡಿರುವ ಕೊಡುಗೆಗಳ ಬಗ್ಗ ವಿವರಿಸಲೂ ನಡ್ಡಾ ಸೂಚಿಸಿದ್ದಾರೆ