ಕರ್ನಾಟಕ ರಾಜ್ಯಕ್ಕೆ ಸರ್ಕಾರದ ಬದಲಾವಣೆ ಅವಶ್ಯಕತೆಯಿದೆ; ಪಂಜಾಬ್‌ ಸಿಎಂ ಭಗವಂತ್‌ ಮಾನ್

ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸುರೇಶ್‌ ರಾಥೋಡ್‌ ಪರ ಪಂಜಾಬ್‌ ಸಿಎಂ ಭಗವಂತ್‌ ಮಾನ್ ಭರ್ಜರಿ ರೋಡ್‌ ಶೋ ನಡೆಸಿದರು. 

First Published May 1, 2023, 11:13 AM IST | Last Updated May 1, 2023, 11:13 AM IST

ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸುರೇಶ್‌ ರಾಥೋಡ್‌ ಪರ ಪಂಜಾಬ್‌ ಸಿಎಂ ಭಗವಂತ್‌ ಮಾನ್ ಭರ್ಜರಿ ರೋಡ್‌ ಶೋ ನಡೆಸಿದರು. ರೋಡ್‌ ಶೋ ನಡೆಸಿ ಮಾತಾನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ದ ಹರಿಹಾಯ್ದರು.  ಪಂಜಾಬ್‌ನಲ್ಲಿ ಒಮ್ಮೆಕಾಂಗ್ರೆಸ್‌ ಸರಕಾರ ಅಥವಾ ಬಿಜೆಪಿ ಸರ್ಕಾರ ಬರುತ್ತಿತ್ತು.  ಡಬಲ್‌ ಇಂಜಿನ್‌ ಬಿಜೆಪಿ ಸರಕಾರ ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಮಾಣವನ್ನು ಡಬಲ್‌ ಮಾಡಿದೆ. ಇಂತಹ ದುರಾಡಳಿತದ ವಿರುದ್ದ ಜನರು ದೆಹಲಿ ಹಾಗೂ ಪಂಜಾಬ್‌ನಲ್ಲಿ ಮತ ನೀಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತವನ್ನು ಕಂಡುಕೊಂಡಿದ್ದು ಆಮ್‌ ಆದ್ಮಿ ಗೆಲ್ಲಿಸಿದ್ದಾರೆ. ಜನತೆ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕಾದ ಪರಿಸ್ಥಿತಿ ಇದೆ. ಕರ್ನಾಟಕದಲ್ಲಿ ಬದಲಾವಣೆ ಬೇಕಾಗಿದೆ ಇಲ್ಲಿನ ಯುವಕರು ಬದಲಾವಣೆ ಬಯಸುತ್ತಿದ್ದಾರೆ ಆ ಬದಲಾವಣೆ ಹೆಸರೆ ಆಮ್‌ ಆದ್ಮಿ ಎಂದು ಹೇಳಿದರು. 

Video Top Stories