Suvarna Special: ಇಬ್ಬರ ಜಗಳ ಮೂರನೆಯವನ ಆಟ, ಜೆಡಿಎಸ್ ಯಾರಿಗೆ B ಟೀಮ್?

2018ರಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಮ್ ಅಂದಿದ್ರು ಸಿದ್ದರಾಮಯ್ಯ. ಈ ಬಾರಿ ಜೆಡಿಎಸ್ ಕಾಂಗ್ರೆಸ್'ನ ಬಿ ಟೀಮ್ ಅಂತಿದ್ದಾರೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ.

First Published May 2, 2023, 4:08 PM IST | Last Updated May 2, 2023, 4:08 PM IST

2018ರಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಮ್ ಅಂದಿದ್ರು ಸಿದ್ದರಾಮಯ್ಯ. ಈ ಬಾರಿ ಜೆಡಿಎಸ್ ಕಾಂಗ್ರೆಸ್'ನ ಬಿ ಟೀಮ್ ಅಂತಿದ್ದಾರೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ. ಹಾಗಾದ್ರೆ ಯಾರು ಯಾರಿಗೆ ಬಿ ಟೀಮ್..? ಮೋದಿ-ಶಾ ಜೋಡಿ ಜೆಡಿಎಸ್ಸನ್ನು ಟಾರ್ಗೆಟ್ ಮಾಡ್ತಿರೋದ್ರ ಹಿಂದಿನ ಅಸಲಿಯತ್ತೇನು...? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.ದೇವೇಗೌಡರ ಜೆಡಿಎಸ್ ಈ ಬಾರಿ ಕಾಂಗ್ರೆಸ್'ನ ಬಿ ಟೀಮ್ ಆಗಿ ಕೆಲಸ ಮಾಡ್ತಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪ ಮಾಡ್ತಿದ್ದಾರೆ.

Chikkamagaluru Constituencies: 5 ಕ್ಷೇತ್ರಗಳ ಸಮೀಕ್ಷೆ, 

ಇದಕ್ಕೆ ಸಾಕ್ಷಿ ಅನ್ನೋ ಹಾಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ಸೋಲಿಗೆ ಅಲ್ಲಿನ ಸ್ಥಳೀಯ ಜೆಡಿಎಸ್ ನಾಯಕರು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ. ಇತ್ತ ವಿಜಯಪುರ ನಗರ ಕ್ಷೇತ್ರದಲ್ಲಿ ಕಣದಿಂದಲೇ ಹಿಂದೆ ಸರಿದಿರೋ ಜೆಡಿಎಸ್ ಅಭ್ಯರ್ಥಿ, ಕಾಂಗ್ರೆಸ್'ಗೆ ಬೆಂಬಲ ಸೂಚಿಸಿದ್ದಾರೆ. ಇದಕ್ಕೆ ಮತ್ತೊಂದು ಸಾಕ್ಷಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರೋ ಒಳಸುಳಿ ಆಟ.ಹೀಗೆ ಒಟ್ಟು 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆಗಿರೋ ರೀತಿ ಕಾಣ್ತಾ ಇದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಈ ನಾಲ್ಕೂ ಕ್ಷೇತ್ರಗಳಲ್ಲಿ ಜೆಡಿಎಸ್'ಗೆ ಭದ್ರನೆಲೆ ಇಲ್ಲ. ಆದ್ರೆ ಗೆಲುವು-ಸೋಲನ್ನು ನಿರ್ಧರಿಸುವ ಶಕ್ತಿಯಂತೂ ಇದೆ. ಇದನ್ನು ನೋಡಿಯೇ ಮೋದಿ-ಅಮಿತ್ ಶಾ ಜೆಡಿಎಸ್-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದಿದ್ದಾರೆ.

Video Top Stories