ಜನರನ್ನು ಗುಲಾಮರೆಂದು ಕಾಂಗ್ರೆಸ್ ತಿಳಿದುಕೊಂಡಿದೆ: ಖರ್ಗೆ ಹೇಳಿಕೆಗೆ ಸಿಎಂ ಬೊಮ್ಮಾಯಿ ಗರಂ

ಮೋದಿ ವಿಷದ ಹಾವು ಎಂಬ ಖರ್ಗೆ ಹೇಳಿಕೆಗೆ, ಕಾಂಗ್ರೆಸ್ ತನ್ನ ನೂರು ವರ್ಷಗಳ ಸಂಸ್ಕೃತಿಯನ್ನು ಗಾಳಿಗೆ ತೂರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

First Published Apr 28, 2023, 1:11 PM IST | Last Updated Apr 28, 2023, 1:11 PM IST

ಮೋದಿ ವಿಷದ ಹಾವು ಎಂಬ ಖರ್ಗೆ ಹೇಳಿಕೆಗೆ, ಕಾಂಗ್ರೆಸ್ ತನ್ನ ನೂರು ವರ್ಷಗಳ ಸಂಸ್ಕೃತಿಯನ್ನು ಗಾಳಿಗೆ ತೂರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಮಾಧ್ಯಮದ ಜತೆ ಮಾತನಾಡಿದ ಅವರು  ಜನರು ಮತ ಬ್ಯಾಂಕ್, ಗುಲಾಮರೆಂದು ಕಾಂಗ್ರೆಸ್ ತಿಳಿದುಕೊಂಡಿದ್ದು ,  ಏನು ಬೇಕಾದರೂ ಮಾತಾಡಿದರೆ ನಡೆಯುತ್ತದೆ ಎಂಬ ಅಮಲಿನಲ್ಲಿ ಇದ್ದಾರೆ ಎಂದು ಹೇಳಿದರು. ಖರ್ಗೆ ಅವರು ಮಾತಾಡಿರೋದು ಎಲ್ಲಕಿಂತ ಹೆಚ್ಚು ನೋವಾಗಿದೆ. ಸಿದ್ದರಾಮಯ್ಯ ಹಾಗೂ ಖರ್ಗೆ ಅವರು 45 ರಿಂದ 50 ವರ್ಷ ಸಾರ್ವಜನಿಕ ಜೀವನ ಕಳೆದಿದ್ದಾರೆ. . ಕೊನೆಯ ಹಂತದಲ್ಲಿ ಗೌರವಯುತವಾಗಿ ನಡೆದುಕೊಂಡರೆ ಶೋಭೆ ತರುತ್ತದೆ  ಇಲ್ಲದಿದ್ದರೆ ಜನ ಇಷ್ಟು ವರ್ಷ ಇವರು ಏನು ಮಾಡಿದರು ಎಂದು ಪ್ರಶ್ನಿಸುತ್ತಾರೆ ಎಂದು ಹೇಳಿದರು .

Video Top Stories