ನೇತಾಜಿ ವಿದೇಶಲ್ಲಿ ನೆರವು ಕೇಳಿದ್ದಾರೆ, ಈಗ ರಾಹುಲ್ ಗಾಂಧಿ ಕೇಳಿದರೆ ತಪ್ಪೇನು?ಕಾಂಗ್ರೆಸ್ ಸಮರ್ಥನೆ!
ಭಾರತ ಅಪಾಯದಲ್ಲಿದೆ. ಲಂಡನ್, ಅಮೆರಿಕ ಭಾರತದ ಮಧ್ಯಪ್ರವೇಶಿಸಬೇಕು ಅನ್ನೋ ರಾಹುಲ್ ಮಾತನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಈ ಕುರಿತು ಗಂಭೀರ ಚರ್ಚೆಯ ಹೈಲೈಟ್ಸ್ ಇಲ್ಲಿದೆ.
ಲಂಡನ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಡಿದ ಮಾತು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಭಾರತ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅಮೆರಿಕ. ಯರೋಪ್ ಮಧ್ಯಪ್ರವೇಶಿಸಬೇಕು ಎಂದು ರಾಹುಲ್ ಗಾಂಧಿ ನೀಡಿದ ಆಹ್ವಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಮಾತನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಬ್ರಿಟಿಷ್ ಆಳಿತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ವಿದೇಶಕ್ಕೆ ಹೋಗಿ ಭಾರತಕ್ಕೆ ನೆರವು ನೀಡಲು ಕೇಳಿದ್ದಾರೆ. ಜವಾಹರ್ ಲಾಲ್ ನೆಹರೂ ವಿದೇಶದಲ್ಲಿ ನೆರವು ಕೇಳಿದ್ದಾರೆ. ಇದೀಗ ರಾಹುಲ್ ಗಾಂಧಿ ತಪ್ಪೇನು? ಎಂದು ವಾದ ಮುಂದಿಟ್ಟಿದ್ದಾರೆ.