ರಾಜ್ಯದಲ್ಲಿ ಒಂದೇ ವಾರಕ್ಕೆ ಸಿಎಂ ಕುರ್ಚಿ ಸಮರ, ನಾಳೆ ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್!
ಸಿದ್ದರಾಮಯ್ಯ ಡಿಕೆಶಿ ಸರಣಿ ಸಭೆ, ಅಧಿಕಾರಿಗಳ ಜೊತೆ ಮೀಟಿಂಗ್, ಸಂಪುಟ ವಿಸ್ತರಣೆ ಸರ್ಕಸ್, ನಾಳೆ ದಿಲ್ಲಿಗೆ ಸಿದ್ದು-ಡಿಕೆಶಿ, ಸಿಎಂ ಆದ ಒಂದೇ ವಾರಕ್ಕೆ ಶುರುವಾಯ್ತು ಕುರ್ಚಿ ಸಮರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಹಲವು ದಿನಗಳ ಹಗ್ಗಜಗ್ಗಾಟದ ಬಳಿಕ ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆಯಾದರೆ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿ ಆಡಳಿತ ಶುರುಮಾಡಿದ್ದಾರೆ. ಆದರೆ ಒಂದೇ ವಾರಕ್ಕೆ ಇದೀಗ ಅಧಿಕಾರ ಹಂಚಿಕೆ ವಿಚಾರ ಕಾಂಗ್ರೆಸ್ ಎರಡು ಬಣಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಎಂಬಿ ಪಾಟೀಲ್ ಸಿಡಿಸಿದ ಬಾಂಬ್ ಇದೀಗ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಕಿಡಿ ಹೊತ್ತಿಸಿದೆ. ಅಧಿಕಾರ ಹಂಚಿಕೆ ಇಲ್ಲ ಎಂದ ಪಾಟೀಲ್ ಹೇಳಿಕೆ ಡಿಕೆಶಿವಕುಮಾರ್ ಬಣವನ್ನು ಕೆರಳಿಸಿದೆ. ಇದೀಗ ಖಡಕ್ ವಾರ್ನಿಂಗ್ ಕೂಡ ನೀಡಲಾಗಿದೆ. ಇತ್ತ ಹೊಸ ಸರ್ಕಾರದ ಸಂಪುಟ ವಿಸ್ತರಣೆಗೆ ಅಂತಿಮ ಮುದ್ರೆ ಒತ್ತಲು ನಾಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಾಳೆ ದೆಹಲಿಗೆ ತೆರಳುತ್ತಿದ್ದಾರೆ. ಈಗಾಗಲೇ ಸಂಪುಟಕ್ಕೆ ತಮ್ಮ ತಮ್ಮ ಆಪ್ತರನ್ನು ಸೇರಿಸಿಕೊಳ್ಳಲು ಒಂದು ಹಂತದ ಜಟಾಪಟಿಗಳು ನಡೆದಿದೆ.