Asianet Suvarna News Asianet Suvarna News

ಸಚಿವ ಸ್ಥಾನ ಸಿಕ್ಕೇ ಬಿಡುತ್ತದೆ ಎಂದಿದ್ದ ಬಿಜೆಪಿ ಶಾಸಕರಿಗೆ ಭಾರಿ ನಿರಾಸೆ!

ಸದನಕ್ಕೆ ಸಚಿವರಾಗಿ ಹೋಗುವ ಆಸೆ ಹೊತ್ತಿದ್ದವರಿಗೆ ನಿರಾಸೆಯಾಗಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟ ವಿಸ್ತರಣೆ ವಿಧಾನಮಂಡಲ ಅಧಿವೇಶನದ ಬಳಿಕ ನಡೆಯುವುದು ಬಹುತೇಕ ಖಚಿತವಾಗಿದೆ. 
 

ಬೆಂಗಳೂರು (ಸೆ. 20): ಸದನಕ್ಕೆ ಸಚಿವರಾಗಿ ಹೋಗುವ ಆಸೆ ಹೊತ್ತಿದ್ದವರಿಗೆ ನಿರಾಸೆಯಾಗಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟ ವಿಸ್ತರಣೆ ವಿಧಾನಮಂಡಲ ಅಧಿವೇಶನದ ಬಳಿಕ ನಡೆಯುವುದು ಬಹುತೇಕ ಖಚಿತವಾಗಿದೆ. 

ಹಿಂದಿ ಹೇರಿಕೆಗೆ ಸುಮಲತಾ ಕಿಡಿ: ಅಧಿವೇಶನದಲ್ಲಿ ಕನ್ನಡ ಪರ ಘರ್ಜಿಸಿದ ರಾಜ್ಯದ ಏಕೈಕ MP

ಭಾನುವಾರ ಸಂಪುಟ ವಿಸ್ತರಣೆಯನ್ನು ಎದುರು ನೋಡುತ್ತಿದ್ದವರಿಗೆ ಭಾರೀ ನಿರಾಸೆಯಾಗಿದೆ. ವಿಸ್ತರಣೆ ಬಗ್ಗೆ ಹೈಕಮಾಂಡ್‌ನಿಂದ ಯಾವುದೇ ಸೂಚನೆ ಬರದ ಹಿನ್ನಲೆಯಲ್ಲಿ ಅಧಿವೇಶನದ ಬಳಿಕ ನಡೆಯಲಿದೆ ಎಂದು ಹೇಳಲಾಗುತ್ತಿದೆ. ವಿಧಾನಪರಿಷತ್ ಸದಸ್ಯರಾದ ಎಚ್‌ ವಿಶ್ವನಾಥ್, ಆರ್ ಶಂಕರ್, ಎಂಟಿಬಿ ನಾಗರಾಜ್, ಸಿಪಿ ಯೋಗೇಶ್ವರ್ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಸಚಿವ ಸ್ಥಾನ ಸಿಗಬೇಕೆಂದ್ರೆ ಅಧಿವೇಶನ ಮುಗಿಯುವವರೆಗೆ ಕಾಯಲೇಬೇಕಾಗುತ್ತದೆ..!