ಬಿಜೆಪಿ ಮೊದಲ ಪಟ್ಟಿಯಲ್ಲಿ ಯಾರಿಗೆ ಶಾಕ್‌ ಯಾರಿಗೆ ಲಕ್‌?

ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವುದು ಯಾವಾಗ, ಘೋಷಣೆಯಾಗುವುದು ಯಾವಾಗ ಎಂಬ ಕುತೂಹಲ ಇನ್ನು ಮುಂದುವರೆದಿದೆ. ಸಭೆ ಮೇಲೆ ಸಭೆಯನ್ನು ಬಿಜೆಪಿ ನಾಯಕರು ನಡೆಸುತ್ತಿದ್ದು, ಆಯಾಯ ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆ ಆಧರಿಸಿ ಟಿಕೆಟ್ ಘೋಷಣೆಯಾಗಲಿದೆ ಎಂದು ಸಿಎಂ ಹಾಗೂ ಸಚಿವ ಪ್ರಹ್ಲಾದ್ ಜೋಷಿ ಹೇಳ್ತಿದ್ದಾರೆ.  

First Published Apr 11, 2023, 12:10 PM IST | Last Updated Apr 11, 2023, 12:11 PM IST

ಬೆಂಗಳೂರು:  ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವುದು ಯಾವಾಗ, ಘೋಷಣೆಯಾಗುವುದು ಯಾವಾಗ ಎಂಬ ಕುತೂಹಲ ಇನ್ನು ಮುಂದುವರೆದಿದೆ. ಸಭೆ ಮೇಲೆ ಸಭೆಯನ್ನು ಬಿಜೆಪಿ ನಾಯಕರು ನಡೆಸುತ್ತಿದ್ದು, ಆಯಾಯ ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆ ಆಧರಿಸಿ ಟಿಕೆಟ್ ಘೋಷಣೆಯಾಗಲಿದೆ ಎಂದು ಸಿಎಂ ಹಾಗೂ ಸಚಿವ ಪ್ರಹ್ಲಾದ್ ಜೋಷಿ ಹೇಳ್ತಿದ್ದಾರೆ.  ಹಾಲಿ ಶಾಸಕರಿಗೆ ಕೊಕ್ ಎಂಬ ವಿಚಾರ ಕೇವಲ ಊಹಾಪೋಹಾ ಎಂದು ಸಿಎಂ ಹೇಳಿದ್ದಾರೆ. 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ಕಗ್ಗಟ್ಟಾಂಗಿದೆ, ಚುನಾವಣೆಗೆ ವಾರ, ತಿಂಗಳಿರುವಾಗ ಕೆಲವರು ಬಿಜೆಪಿಗೆ ಸೇರಿದ್ದು, ಅವರಿಗೆ ಟಿಕೆಟ್ ನೀಡುವ ಅಭಿಪ್ರಾಯ ಮೂಲ ಕಾರ್ಯಕರ್ತರು ಸಿಟ್ಟಿಗೇಳುವಂತೆ ಮಾಡಿದೆ. ಕ್ಷೇತ್ರ ಸಮೀಕ್ಷೆಗೂ ನಾಯಕರ ಪಟ್ಟಿಗೂ ಬರೀ ವ್ಯತ್ಯಾಸವಿದೆ. ಹೀಗಾಗಿ ಬಿಜೆಪಿಯವರು ಸಮೀಕ್ಷೆಯಂತೆಯೇ ಟಿಕೆಟ್ ನೀಡ್ತಾರ ಅಥವಾ ಎಲ್ಲರೂ ಚರ್ಚಿಸಿ ಬೇರೆಯದೇ ನಿರ್ಧಾರಕ್ಕೆ ಬರ್ತಾರ ಎಂಬುದನ್ನು ಕಾದು ನೋಡಬೇಕಿದೆ.  
 

Video Top Stories