JanaMata: 10 ಪ್ರಶ್ನೆ, 35 ಲಕ್ಷ ಜನರ ಉತ್ತರ, ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಜನಾಭಿಪ್ರಾಯ!
ರಾಜ್ಯ ಚುನಾವಣೆಯಲ್ಲಿ ಮಹತ್ವವಾಗಿರುವ 10 ಪ್ರಮುಖ ಪ್ರಶ್ನೆಗಳನ್ನು ಇಟ್ಟುಕೊಂಡು ಆನ್‌ಲೈನ್ ಮೂಲಕ ಜನರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಸಿಕ್ಕಿದ್ದು ಭರ್ಜರಿ ಸ್ಪಂದನೆ. ಕರ್ನಾಟಕದ ಬಗ್ಗೆ ದೇಶದ ಜನತೆ ಹಾಗೂ ರಾಜ್ಯದ ಬಗ್ಗೆ ನಮ್ಮ ಜನತೆ ನೀಡಿರುವ ಅಭಿಪ್ರಾಯ ಇಲ್ಲಿದೆ.
ಬೆಂಗಳೂರು (ಏ.21): ಪ್ರಸ್ತುತ ರಾಜ್ಯ ಸರ್ಕಾರದ ಆಡಳಿತ ತೃಪ್ತಿಕರವಾಗಿದೆಯೇ..? ನಿಮ್ಮ ಪ್ರಕಾರ ಯಾವುದು ಹೆಚ್ಚು ಭ್ರಷ್ಟ ಸರ್ಕಾರ? ಮುಸ್ಲಿಂ ಮೀಸಲಾತಿ ರದ್ದುಗೊಳಿಸಿ ಆ ಪ್ರಮಾಣವನ್ನು ಒಕ್ಕಲಿಗ, ಲಿಂಗಾಯತರಿಗೆ ಹಂಚಿಕೆ ಮಾಡಿದ ಬಿಜೆಪಿ ಸರ್ಕಾರದ ನಿರ್ಧಾರ ಸರಿಯೇ? ಇಂಥವೇ 10 ಪ್ರಶ್ನೆಗಳನ್ನು ಇರಿಸಿಕೊಂಡು ಏಷ್ಯಾನೆಟ್ ಸುವರ್ಣನ್ಯೂಸ್ ಕನ್ನಡ ವೆಬ್‌ಸೈಟ್ ನಡೆಸಿದ ಆನ್‌ಲೈನ್ ಸಮೀಕ್ಷೆಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಈ ಪ್ರಶ್ನೆಗಳಿಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಉತ್ತರ ನೀಡಿದ್ದು ಬರೋಬ್ಬರಿ 35 ಲಕ್ಷ ಮಂದಿ. ಹಾಲಿ ಸರ್ಕಾರದ ಬಗ್ಗೆ ಜನರು ಎಷ್ಟು ಖುಷಿಯಾಗಿದ್ದಾರೆ, ರಾಹುಲ್ ಗಾಂಧಿ-ನರೇಂದ್ರ ಮೋದಿ ಕುರಿತಾಗಿ ಜನರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ.
JanaMata: ಮೋದಿಯಿದ್ರೆ ಮಾತ್ರ ಬಿಜೆಪಿಗೆ ಬಹುಪರಾಕ್, ಇಲ್ದಿದ್ರೆ ಫುಲ್ ವೀಕ್!
ಗಮನಕ್ಕೆ: ಇದು ವೈಜ್ಞಾನಿಕವಾಗಿ ಮಾಡಿರುವ ಸಮೀಕ್ಷೆಯಲ್ಲ. ಇಲ್ಲಿ ಪ್ರತಿಕ್ರಿಯಿಸಿದ ಶೇಕಡಾ 48 ರಷ್ಟು ಜನರು ಕರ್ನಾಟಕದವರಲ್ಲ. ಹಾಗಾಗಿ ಹೆಚ್ಚಿನವರು ಇಲ್ಲಿ ಮತದಾರರಲ್ಲ. ಇಂಗ್ಲೀಷ್‌ನಲ್ಲಿ ಬಂದಿರುವ ಉತ್ತರಗಳು ಹಾಗೂ ಕನ್ನಡದಲ್ಲಿ ಬಂದಿರುವ ಉತ್ತರಗಳಿಗಿಂದ ಭಿನ್ನವಾಗಿರುತ್ತದೆ. ಕನ್ನಡದಲ್ಲಿ ಉತ್ತರಗಳು ರಾಜ್ಯದಲ್ಲಿನ ನೈಜ ಪರಿಸ್ಥಿತಿಗೆ ಹತ್ತಿರವಾಗಬಹುದು.