ಶೆಟ್ಟರ್‌ಗೆ ಟಿಕೆಟ್‌ ತಪ್ಪಿಸುತ್ತಿರುವುದು ನಾನಲ್ಲ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ ಧಾರವಾಡ  ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌  ಘೋಷಣೆಯಾಗಿಲ್ಲವಾಗಿದ್ದು, ಜಗದೀಶ್‌ ಶೆಟ್ಟರ್‌  ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಮಾತನಾಡಿದ್ದು ಟಿಕೆಟ್‌ ತಪ್ಪಿಸುವ ಕೆಲಸ ಮಾಡಲ್ಲ,ಶೆಟ್ಟರ್ ಬಹಳ ಆತ್ಮೀಯರು.  ಬೆಂಬಲಿಗರು ನೂರಾರು ಆರೋಪ ಮಾಡುತ್ತಾರೆ ಎಂದು ಹೇಳಿದ್ದಾರೆ. 
 

First Published Apr 15, 2023, 1:06 PM IST | Last Updated Apr 15, 2023, 1:06 PM IST

 ಹುಬ್ಬಳ್ಳಿ ಧಾರವಾಡ  ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌  ಘೋಷಣೆಯಾಗಿಲ್ಲವಾಗಿದ್ದು, ಜಗದೀಶ್‌ ಶೆಟ್ಟರ್‌  ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಮಾತನಾಡಿದ್ದು ಟಿಕೆಟ್‌ ತಪ್ಪಿಸುವ ಕೆಲಸ ಮಾಡಲ್ಲ,ಶೆಟ್ಟರ್ ಬಹಳ ಆತ್ಮೀಯರು.  ಬೆಂಬಲಿಗರು ನೂರಾರು ಆರೋಪ ಮಾಡುತ್ತಾರೆ ಎಂದು ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು ನಾವು ಪಕ್ಷದ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದೇವೆ ಶೆಟ್ಟರ್ ಟಿಕೆಟ್ ಗಾಗಿ ಬಹಳ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ,.ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಲಾಗಿದೆ ಶೆಟ್ಟರ್ ಅವರದ್ದು ಜನಸಂಘ ಕಾಲದ ಮನೆತನ,ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ.ಬಿಜೆಪಿಗೆ ಜಗದೀಶ್‌ ಶೆಟ್ಟರ್ ಅತ್ಯಂತ ನಿಷ್ಠರು. ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆ. ಜೆಪಿ ನಡ್ಡಾ ಅವರಿಗೂ ಮಾತನಾಡಿದ್ದೇನೆ ಎಂದು ಹೇಳಿದ್ದಾರ. 

Video Top Stories