Karnataka Assembly Elections: ರಾಜ್ಯದಲ್ಲಿ ಮೂರೂ ಪಕ್ಷಗಳ ಅಬ್ಬರದ ಪ್ರಚಾರ!

ರಾಜ್ಯದಲ್ಲಿ ಇಂದು ಮೂರೂ ಪಕ್ಷಗಳು ಅಬ್ಬರ ಪ್ರಚಾರ ನಡೆಸಿದವು. ಬಿಜೆಪಿಯಿಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಪ್ರಚಾರ ಮಾಡಿದರೆ, ಕಾಂಗ್ರೆಸ್‌ನಿಂದ ಪ್ರಿಯಾಂಕಾ ವಾದ್ರಾ, ಸಿದ್ದರಾಮಯ್ಯ, ಜೆಡಿಎಸ್‌ನಿಂದ ಕುಮಾರಸ್ವಾಮಿ ಪ್ರಚಾರ ಮಾಡಿದರು.

First Published Apr 26, 2023, 12:20 AM IST | Last Updated Apr 26, 2023, 12:20 AM IST

ಬೆಂಗಳೂರು (ಏ.25): ರಾಜ್ಯದಲ್ಲಿ ಮೂರೂ ಪಕ್ಷಗಳ ಚುನಾವಣಾ ಪ್ರಚಾರ ಜೋರಾಗಿದೆ. ವಿಧಾನಸಭೆ ಚುನಾವಣೆಗೆ ಇನ್ನು 2 ವಾರವಷ್ಟೇ ಬಾಕಿ ಇದೆ. ಬಿಜೆಪಿ ದೊಡ್ಡ ಪಡೆಯೇ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿದೆ. 2ನೇ ದಿನವೂ ಅಮಿತ್‌ ಶಾ ಪ್ರಚಾರದಲ್ಲಿ ಭಾಗಿಯಾದರೆ, ನಾಳೆಯಿಂದ ಯೋಗಿ ಆದಿತ್ಯನಾಥ್‌ ಕೇಸರಿ ಕಲಿಗಳ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ.

ಇನ್ನು ಅನಾರೋಗ್ಯದ ಸಮಸ್ಯೆಯ ನಡುವೆಯೂ ದೇವೇಗೌಡರು ಮಗ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸಿದರು. ಬಿಜೆಪಿ ಹಾಗೂ ಕಾಂಗ್ರೆಸ್‌ ದಳಪತಿಗಳ ಭದ್ರಕೋಟೆಯನ್ನು ಛಿದ್ರ ಮಾಡುವ ಗುರಿಯಲ್ಲಿದ್ದರೆ, ಜೆಡಿಎಸ್‌ ಮಾತ್ರ ಇಲ್ಲಿನ ಮತಬ್ಯಾಂಕ್‌ಅನ್ನು ಮತ್ತಷ್ಟು ಗಟ್ಟಿ ಮಾಡುವ ಉತ್ಸಾಹದಲ್ಲಿದೆ.

Party Rounds: ಅಖಾಡವನ್ನೇ ಬದಲಿಸಬಲ್ಲ MAY ಪ್ರಚಾರಕ್ಕೆ ಮಹೂರ್ತ ಫಿಕ್ಸ್‌!

ಒಂದೆಡೆ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಕಾಂಗ್ರೆಸ್‌ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಪ್ರಿಯಾಂಕಾ ವಾದ್ರಾ ಇಂದು ಕರ್ನಾಟಕದಲ್ಲಿ ಪ್ರಚಾರ ನಡೆಸಿದರು. ಎಚ್‌ಸಿ ಮಹದೇವಪ್ಪ ಅವರ ಪರವಾಗಿ ಪ್ರಿಯಾಂಕಾ ಪ್ರಚಾರ ಮಾಡಿದರು. ಬೆಳಗಾವಿಯಲ್ಲಿ ಕನಿಷ್ಠ 10 ಕ್ಷೇತ್ರವನ್ನು ಗೆಲ್ಲುವ ಇರಾದೆಯಲ್ಲಿರುವ ಕಾಂಗ್ರೆಸ್‌ ಪಕ್ಷದ ಪರವಾಗಿ ಇಂದು ಸಿದ್ಧರಾಮಯ್ಯ ಪ್ರಚಾರ ಮಾಡಿದರು. ಮುಂದೆ ನಾವು ಅಧಿಕಾರಕ್ಕೆ ಬಂದರೆ ಮನೆ ಮಕ್ಕಳಂತೆ ನೋಡಿಕೊಳ್ತೇವೆ ಎಂದು ಭರವಸೆ ನೀಡಿದರು.